Home News Mangaluru: ಮಂಗಳೂರಿನಲ್ಲಿ ಭಾರೀ ಮಳೆ: ನೆರೆ ಸಂತ್ರಸ್ತರಿಗೆ ಕದ್ರಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ

Mangaluru: ಮಂಗಳೂರಿನಲ್ಲಿ ಭಾರೀ ಮಳೆ: ನೆರೆ ಸಂತ್ರಸ್ತರಿಗೆ ಕದ್ರಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರಿನಲ್ಲಿ ಮಳೆ ಅಬ್ಬರ ಹೆಚ್ಚಾದ ಕಾರಣ ಸಂತ್ರಸ್ತರಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ರವಿವಾರ (ಜೂ.15) ಮಧ್ಯಾಹ್ನದ ಊಟದ ವ್ಯವಸ್ಥೆ ನೀಡದಲು ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿರ್ಧಾರ ಮಾಡಿದೆ.

ಮಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಯ ಒಳಗಡೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಂತಹ ಕುಟುಂಬಗಳಿಗೆ ಶ್ರೀ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಾಡಲಾಗಿದೆ.

ತೊಂದರೆಗೊಳಗಾದ ಮನೆಮಂದಿ ಶ್ರೀ ಕ್ಷೇತ್ರಕ್ಕೆ ಬಂದು ತಮ್ಮ ಮನೆಯ ಸದಸ್ಯರಿಗೆ ಅನ್ನವನ್ನು ತೆಗೆದುಕೊಂಡು ಹೋಗಬೇಕಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಸಂಪರ್ಕಿಸಬೇಕಾದ ಸಂಖ್ಯೆ:

ದಿಲ್‌ರಾಜ್‌ ಆಳ್ವ ಮಂಗಳಾದೇವಿ:9900512727

ರಾಜೇಂದ್ರ ಚಿಲಿಂಬಿ: 9972185251

ಕಿರಣ್‌ ಕೊಡಿಯಾಲ್‌ ಬೈಲ್‌: 7899509356

ಅರುಣ್‌ ಕದ್ರಿ- 9243303805