Home News Heavy Rain: ನಾಗರಹೊಳೆ ಅರಣ್ಯ, ಕೇರಳದ ವೈನಾಡಿನಲ್ಲಿ ಅತೀ ಹೆಚ್ಚು ಮಳೆ ಹಿನ್ನಲೆ – ಕಬಿನಿ,...

Heavy Rain: ನಾಗರಹೊಳೆ ಅರಣ್ಯ, ಕೇರಳದ ವೈನಾಡಿನಲ್ಲಿ ಅತೀ ಹೆಚ್ಚು ಮಳೆ ಹಿನ್ನಲೆ – ಕಬಿನಿ, ತಾರಕ ಜಲಾಶಯದಿಂದ ನದಿಗೆ ನೀರು ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

Heavy Rain: ಕಳೆದೊಂದು ವಾರದಿಂದ ನಾಗರಹೊಳೆ ಅರಣ್ಯ ವ್ಯಾಪ್ತಿ ಹಾಗೂ ಕೇರಳದ ವೈನಾಡಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನಿ, ತಾರಕ ಜಲಾಶಯದಿಂದ ಕಪಿಲಾ ನದಿಗೆ 49 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.

ತಾರಕ: ಅತೀ ಹೆಚ್ಚು ಮಳೆ ಹಿನ್ನೆಲೆಯಲ್ಲಿ ತಾರಕ ಜಲಾಶಯಕ್ಕೆ 7 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶ ಯದ 3 ಕ್ರಸ್ಟ್ ಗೇಟ್‌ಗಳಿಂದ 9 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತಾರಕ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಾಹಿತಿ ನೀಡಿದ್ದಾರೆ.

ನದಿಗೆ ಜಲಾಶಯದಿಂದ ನೀರು ಹರಿಸುತ್ತಿ ರುವ ಕಾರಣ ಕಟ್ಟೆಮನಗನಹಳ್ಳಿ ಗ್ರಾಮದ ಬಳಿಯ ಸೇತುವೆ ಸಂಪೂರ್ಣ ಮುಳುಗಡೆ ಯಾಗಿದ್ದು, ಕಟ್ಟೆಮನಾಗನಹಳ್ಳಿ, ಮೊತ್ತ, ಅಲ್ಟಾಲ್ ಹುಂಡಿ, ಮೊತ್ತ ಹಾಡಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ ಹಾಗೂ ಹೆಚ್.ಡಿ. ಕೋಟೆ ಪಟ್ಟಣದಲ್ಲಿರುವ ಅಶ್ವತ್ ಕಟ್ಟೆ ಶಿವನ ದೇವಾಲಯಕ್ಕೆ ನೀರು ನುಗ್ಗಿದೆ.

ಜಲಾಶಯದ ಗರಿಷ್ಠ ಮಟ್ಟ 2425 ಅಡಿಗಳಾ ಗಿದ್ದು, ಜಲಾಶಯದ ಇಂದಿನ ಮಟ್ಟ 2423 ಅಡಿಗಳಾಗಿದೆ. ಜಲಾಶಯ ಭರ್ತಿಗೆ 2 ಅಡಿ ಬಾಕಿ ಉಳಿದಿದ್ದು, ಜಲಾಶಯದ ಭದ್ರತಾ ಹಿತದೃಷ್ಟಿಯಿಂದ ನೀರನ್ನು ನದಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬಿನಿ: ತಾಲೂಕಿನ ಬೀಚನಹಳ್ಳಿ ಗ್ರಾಮದ ಲ್ಲಿರುವ ಕಜಿನಿ ಜಲಾಶಯಕ್ಕೆ ಕೇರಳದ ವೈನಾಡು, ನಾಗರಹೊಳೆ ಅರಣ್ಯ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾ ಶಯದ 4 ಕ್ರಸ್ಟ್ ಗೇಟ್ಗಳಿಂದ ಕಪಿಲಾ ನದಿಗೆ 40 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಕಜನಿ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್ ತಿಳಿಸಿದ್ದಾರೆ.

ಕಬಿನಿ ನೀರಿನ ಮಟ್ಟ

ಗರಿಷ್ಠ ಮಟ್ಟ – 2,284 ಅಡಿ

ಇಂದಿನ ಮಟ್ಟ – 22846 ಅಡಿ

ಒಳ ಹರಿವು – 30000 ಕ್ಯೂಸೆಕ್

ಹೊರ ಹರಿವು – 40000 ಕ್ಯೂಸೆಕ್

ತಾರಕ ನೀರಿನ ಮಟ್ಟ

ಗರಿಷ್ಠ ಮಟ್ಟ – 2425 ಅಡಿ

ಇಂದಿನ ಮಟ್ಟ – 2423 ಆಡಿ

ಒಳ ಹರಿವು- 7000

ಹೊರ ಹರಿವು – 4000 ಕ್ಯೂಸೆಕ್

ಜಲಾಶಯಕ್ಕೆ 30 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಭದ್ರತೆ ಹಿತ ದೃಷ್ಟಿಯಿಂದ ಜಲಾಶಯದ / ಕ್ಲಸ್ಟ್ ಗೇಟ್‌ ಗಳಿಂದ 35 ಸಾವಿರ ಕ್ಯುಸೆಕ್ ನೀರು ಹಾಗೂ ಸುಭಾಷ್ ಕಬನಿ ಪವರ್ ಪ್ರಾಜೆಕ್ಟನಿಂದ 5 ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನತೆ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bank: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕರ ಉದ್ಯೋಗಿಗಳ ಸಂಖ್ಯೆ ಹೆಚ್ಚಳ – ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಆತಂಕ