Home latest ಧಾರಾಕಾರ ಮಳೆ ಪರಿಣಾಮ : ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ವಾಹನ ಪ್ರವೇಶ ನಿಷೇಧ :...

ಧಾರಾಕಾರ ಮಳೆ ಪರಿಣಾಮ : ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ವಾಹನ ಪ್ರವೇಶ ನಿಷೇಧ : ಜಿಲ್ಲಾಡಳಿತ ಆದೇಶ

Hindu neighbor gifts plot of land

Hindu neighbour gifts land to Muslim journalist

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ  ಅನೇಕ ರಸ್ತೆಗಳು ಜಲಾವೃತಗೊಂಡಿದೆ. ಹಾಗಾಗಿ ಇದರ ಪರಿಣಾಮ, ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗ ಆದೇಶ ಹೊರಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದೆಯಲ್ಲದೇ ಅಧಿಕ ಭಾರ ತುಂಬಿದ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಭೂಕುಸಿತದಿಂದಾಗಿ ಸಂಚಾರಕ್ಕೆ ತೊಂದರೆಯಾಗಿ, ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿರುತ್ತದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕ ಜೀವನ ಮತ್ತು ಆಸ್ತಿಗಳ ಹಿತದೃಷ್ಠಿಯಿಂದ ವಾಹನದ ನೋಂದಣಿ ತೂಕ 16,200 ಕೆಜಿಗಿಂತ ಹೆಚ್ಚಿನ ತೂಕದ ಸರಕು ಮತ್ತು ಸಾಗಾಣಿಕೆ ವಾಹನ ಮಲ್ಟಿ ಆಕ್ಸಿಲ್ ಟ್ರಕ್ ಗಳ ಸಂಚಾರ ಮತ್ತು ಭಾರೀ ವಾಹನಗಳ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾರ್ಸಿ ಮತ್ತು ಮರಗಳು ಸಾಗಾಣೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ಅಂದ್ರೆ ದಿನಾಂಕ 13-10-2022 ರವರೆಗೆ ನಿರ್ಬಂಧಿಸಿ, ಆದೇಶಿಸಿದ್ದಾರೆ.