Home News Manipala: ಕಂಬಳದ ಕೊಣಕ್ಕೆ ಹೃದಯಾಘಾತ: ಒಡೆಯನಿಗೆ ಮೆಡಲ್ ತರಲೇಬೇಕು ಎಂದು ಹಠದಿಂದ ಓಡುತ್ತಿದ್ದ ನಾಗು ಇನ್ನಿಲ್ಲ...

Manipala: ಕಂಬಳದ ಕೊಣಕ್ಕೆ ಹೃದಯಾಘಾತ: ಒಡೆಯನಿಗೆ ಮೆಡಲ್ ತರಲೇಬೇಕು ಎಂದು ಹಠದಿಂದ ಓಡುತ್ತಿದ್ದ ನಾಗು ಇನ್ನಿಲ್ಲ !

Hindu neighbor gifts plot of land

Hindu neighbour gifts land to Muslim journalist

Manipala: ಇತ್ತೀಚೆಗೆ ನಡೆದ ಕರಾವಳಿ (Manipala)ಉಡುಪಿ ಉಭಯ ಜಿಲ್ಲೆಯ ಕಂಬಳ ಕೂಟಗಳಲ್ಲಿ ಸಾಧನೆಗೈದ ‘ ನಾಗು’ ಕೋಣ ಶನಿವಾರ ವಿಧಿವಶವಾಗಿದೆ. 

ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಹೆಸರು ಪಡೆದಿದ್ದ’ಲಕ್ಕಿ’ ಕೋಣವು ಒಂದು ವಾರದ ಹಿಂದಷ್ಟೇ ಕಂಬಳಾಭಿಮಾನಿಗಳನ್ನು ಅಗಲಿ ಹೋಗಿದೆ. ಈಗ ಇದರ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಗಮನ ಸೆಳೆದು ಸಾಧನೆಗೈದ ‘ ನಾಗು’ ಎನ್ನುವ ಕೋಣ ಶನಿವಾರ ಹೃದಯಾಘಾತದಿಂದಾಗಿ ಸಾವನ್ನಪ್ಪಿದೆ.

ಸಾಹಸಿ ನಾಗು ಕೋಣ ನಾಗು ಕೋಣವು ಜಪ್ಪು ಮಂಕು ತೋಟ ಅನಿಲ್‌ ಶೆಟ್ಟಿಯವರ ಯಜಮಾನಿಕೆಯಲ್ಲಿದ್ದ ಕೋಣ. ಹೃದಯಾಘಾತದಿಂದಾಗಿ ಶನಿವಾರ ನಾಗು ಆಸು ನೀಗಿದ್ದಾನೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಹಲಗೆ ಸೀನಿಯ‌ರ್ ವಿಭಾಗಕ್ಕೆ ಸೇರಿದ ನಾಗು ತದ ನಂತರ ಹಲವಾರು ಕಂಬಳಗಳಲ್ಲಿ ತನ್ನ ಸಾಹಸ ಮೆರೆದಿದ್ದ.  ಕಂಬಳದ ಕಣದಲ್ಲಿ ಸಿಗ್ನಲ್ ಸಿಗುತ್ತಿದ್ದಂತೆ ಅವಡುಗಚ್ಚಿ ಹಿಡಿದು ಹಠ ತೊಟ್ಟು ಓಡುತ್ತಿದ್ದ ನಾಗು ಹಲವಾರು ಕಂಬಳಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದ.

ಅದಕ್ಕೂ ಮೊದಲು ಬೈಂದೂರಿನಿಂದ ಹೊರಟಿದ್ದ ಆತ ಬಂಢಾರಮನೆ ಸೇರಿದ. ನಂತರ ಉಡುಪಿ ಚಿತ್ತಾಡಿ ಅಪ್ಪು ಶೆಟ್ಟಿಯವರ ಮನೆಗೆ ಆತ ಶಿಫ್ಟ್. ಜಪ್ಪು ಮಂಕುತೋಟ ಅನಿಲ್ ಶೆಟ್ಟಿಯವರು ಕೇವಲ ಎರಡು ವರ್ಷದ ಹಿಂದೆಯಷ್ಟೇ ನಾಗುವನ್ನು ಖರೀದಿ ಮಾಡಿ ಸಾಕುತ್ತಿದ್ದರು. ಬದುಕಿರುವ ತನಕ ಸಾಕಿದ ಒಡೆಯನಿಗೆ ಹೆಸರು ತರುವ ಕೆಲಸ ಮಾಡಿದ್ದ ನಾಗು.  ಈತನ ಸಾವಿನೊಂದಿಗೆ ಕಂಬಳದಲ್ಲಿ ಹೆಸರು ಮಾಡಿದ ಎರಡು ಕೋಣಗಳನ್ನು ಕೇವಲ ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ. ಅಭಿಮಾನಿಗಳು ಹಾಗೂ ಕಂಬಳ ಕ್ಷೇತ್ರವು ನಗುವಿನ ಮರಣಕ್ಕೆ ಮೌನದಿಂದ ರೋಧಿಸಿದೆ.