Home News Heart Attack: ಹೃದಯಾಘಾತ ಪ್ರಕರಣ : ತಾಂತ್ರಿಕ ಸಲಹಾ ಸಮಿತಿಯಿಂದ ಅರೋಗ್ಯ ಸಚಿವರಿಗೆ ವರದಿ ಸಲ್ಲಿಕೆ...

Heart Attack: ಹೃದಯಾಘಾತ ಪ್ರಕರಣ : ತಾಂತ್ರಿಕ ಸಲಹಾ ಸಮಿತಿಯಿಂದ ಅರೋಗ್ಯ ಸಚಿವರಿಗೆ ವರದಿ ಸಲ್ಲಿಕೆ – ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? ವರದಿಯಲ್ಲೇನಿದೆ?

Hindu neighbor gifts plot of land

Hindu neighbour gifts land to Muslim journalist

Heart Attack: ರಾಜ್ಯದಲ್ಲಿ ಕೊರೋನಕ್ಕಿಂತಲೂ ಇದೀಗ ಭಯಾನಕವಾಗಿ ಕಾಡುತ್ತಿರುವ ಸಮಸ್ಯೆ ಹೃದಯಾಘಾತ. ರಾಜ್ಯದಲ್ಲಿ ಎಲ್ಲೆಂದರಲ್ಲಿ ಜನ ಹೃದಾಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹಾಸ ಜಿಲ್ಲೆಯಲ್ಲಿ ಇದರ ಪ್ರಮಾಣ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಜ್ಞರ ಸಲಹಾ ಸಮಿತಿ ರಚನೆ ಮಾಡುವಂತೆ ಆದೇಶ ಮಾಡಿದ್ರು. ಕೋವಿಡ್ ಲಸಿಕೆಯಿಂದ ಆಗ್ತಿರಬಹುದಾ, ಸಂಭಂದ ಇದ್ಯಾ ಅಂತ ಚೆಕ್ ಮಾಡೋಕೆ ಹೇಳಿದ್ರು. ಅದರ ಬಗ್ಗೆ ವರದಿಯನ್ನ ಕೇಳಿದ್ರು. ಡಾ. ರವೀಂದ್ರ ನಾಥ್, ಟೀಮ್ ಜೊತೆ ಕೆಲಸ ಮಾಡಿ ವರದಿ ಕೊಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೃದಯಾಘಾತ ಸಂಬಂಧ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು. ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಆಯುಕ್ತರು, ತಾಂತ್ರಿಕ ಸಲಹಾ ಸಮಿತಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಧಿಕೃತವಾಗಿ ಆರೋಗ್ಯ ಸಚಿವರಿಗೆ ತಾಂತ್ರಿಕ ಸಲಹಾ ಸಮಿತಿಯಿಂದ ವರದಿಯನ್ನು ಸಲ್ಲಿಕೆ ಮಾಟಲಾಗಿದೆ. ಲಸಿಕೆಗೂ ಹೃದಯಾಘಾತಕ್ಕೆ ಸಂಬಂಧ ಇದ್ಯಾ ಅಂತ ಪತ್ತೆ ಹಚ್ಚಲು ಸಮಿತಿಯನ್ನು ರಚನೆ ಮಾಡಲಾಗಿತ್ತು. ಸದ್ಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾಕ್ಟರ್ ರವೀಂದ್ರನಾಥ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.

ಸಮಿತಿ ಸಲ್ಲಿಕೆ ಮಾಡಿರುವ ವರದಿ & ಸಲಹೆ ಬಗ್ಗೆ ಚರ್ಚಿಸಲಾಗಿದ್ದು, ಜನರಿಗೆ ಯಾವ ರೀತಿ ತಿಳುವಳಿಕಾ ಪತ್ರ ಬಿಡುಗಡೆ ಮಾಡಬಹುದು? ಎಂಬ ಬಗ್ಗೆ ಸಮಿತಿ ಜೊತೆ ಸಚಿವರು ಚರ್ಚೆ ನಡೆಸಿದ್ದಾರೆ. ಸಭೆ ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ಈ ವರದಿಯಲ್ಲಿ ಕೋವಿಡ್ ಬಂದ ನಂತರ ಯಾರ್ಯಾರಿಗೆ ಕೋವಿಡ್ ಆಗಿತ್ತು, ಅಂತವರಿಗೆ ಹೆಚ್ಚು ಲಕ್ಷಣ ಕಂಡು ಬಂದಿದೆ. ಲಸಿಕೆ ತೆಗೆದುಕೊಂಡವರಿಗೆ ಹಾರ್ಟ್ ಅಟ್ಯಾಕ್ ಆಗಿಲ್ಲ. ಮಧುಮೇಹ, ಒಬೆಸಿಟಿ, ಫ್ಯಾಟ್ ನೆಸ್ ಇದ್ದವರಲ್ಲಿ ಹಾರ್ಟ್ ಅಟ್ಯಾಕ್ ಕಂಡು ಬಂದಿದೆ. ಕೋವಿಡ್ ನಿಂದ ಬೇರೆ ಔಷಧಿ ತೆಗೆದು ಕೊಂಡಿರ್ತಾರೆ. ಅದರಿಂದ ಜಾಸ್ತಿ ಅಟ್ಯಾಕ್ ಕಂಡು ಬಂದಿದೆ. ಮೊಬೈಲ್ ಬಳಕೆಯು ಕಾರಣವಾಗಿದೆ. ಜನರ ಬದುಕಿನ ಶೈಲಿಗೆ ಅಟ್ಯಾಕ್ ಕಾರಣವಾಗಿದೆ. ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆ ಆಗಿಲ್ಲ. ಲಸಿಕೆ ತೆಗೆದುಕೊಂಡವರಿಗೆ ಬಹಳ ಅನುಕೂಲ ಆಗಿದೆ ಎಂದು ವರದಿಯಲ್ಲಿದೆ ಎಂದು ಉಲ್ಲೇಖಿಸಿದರು.

MRNA ವ್ಯಾಕ್ಸಿನ್ ಮೇಲೆ ಡೌಟ್ ಇದೆ. ಆದ್ರೆ ನಮ್ಮ ದೇಶದಲ್ಲಿ ಯಾರು ಈ ಲಸಿಕೆ ತೆಗೆದುಕೊಂಡಿಲ್ಲ. ಈ MRNA ಲಸಿಕೆ ಮಯೋಕಾರ್ಡಿಸ್ಟ್ ಆಗೋದು ಕಂಡು ಬಂದಿದೆ. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾಕ್ಟರ್ ರವೀಂದ್ರನಾಥ್, ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ , ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆ ನಿರ್ದೇಶಕರು ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: Greater Bengaluru: ಗ್ರೆಟರ್ ಬೆಂಗಳೂರು ಆಡಳಿತ ವ್ಯವಸ್ಥೆ ಜಾರಿ – ಎತ್ತಿನ ಹೊಳೆ ಯೋಜನೆ ಕಾರ್ಯಕ್ಕೆ ಮುಂದಡಿ – ಡಿಸಿಎಂ ನೇತೃತ್ವದಲ್ಲಿ ಚರ್ಚೆ