Home News Heart Attack: ಮದುವೆ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಕುಸಿದು ಹೃದಯಾಘಾತದಿಂದ ವಧು ಸಾವು!

Heart Attack: ಮದುವೆ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಕುಸಿದು ಹೃದಯಾಘಾತದಿಂದ ವಧು ಸಾವು!

Hindu neighbor gifts plot of land

Hindu neighbour gifts land to Muslim journalist

Heart Attack: ತನ್ನ ಮದುವೆಯ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ಸಂತೋಷದಿಂದ ನೃತ್ಯ ಮಾಡುತ್ತಿದ್ದ ವಧು ಬಾತ್‌ರೂಂಗೆ ಹೋದಾಗ ಅಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ.

22ರ ಹರೆಯದ ವಧು ಕುಸಿದು ಬಿದ್ದು ಸ್ನಾನಗೃಹದಲ್ಲಿ ಮೃತ ಹೊಂದಿದ್ದಾಳೆ. ಸಮಾರಂಭದಲ್ಲಿ ವಧು ನೃತ್ಯ ಮಾಡುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ಘಟನೆ ನಡೆದಿರುವುದು ಮೇ 4 ರಾತ್ರಿ.

ವರನ ಮದುವೆ ಮೆರವಣಿಗೆ ಬೆಳಿಗ್ಗೆ ಬರಬೇಕಿತ್ತು. ಪಲ್ಲಕ್ಕಿಯಲ್ಲಿ ಆಕೆಯನ್ನು ಕಳುಹಿಸುವ ಬದಲು, ಆಕೆಯ ಶವವನ್ನು ಅಂತ್ಯಕ್ರಿಯೆಗಾಗಿ ಹೊತ್ತೊಯ್ಯಲಾಗಿದೆ. ವಧುವಿನ ಹಠಾತ್‌ ಸಾವು ಆಕೆಯ ಮನೆ ಮಂದಿಯನ್ನು ಆಘಾತಕ್ಕೊಳಪಡಿಸಿದೆ.