Home News Heart Attack: 26 ಐಫೋನ್‌ ದೇಹಕ್ಕೆ ಅಂಟಿಸಿ ಕಳ್ಳಸಾಗಣೆಗೆ ಯತ್ನ ಮಾಡಿದ ಯುವತಿಗೆ ಹಾರ್ಟ್‌...

Heart Attack: 26 ಐಫೋನ್‌ ದೇಹಕ್ಕೆ ಅಂಟಿಸಿ ಕಳ್ಳಸಾಗಣೆಗೆ ಯತ್ನ ಮಾಡಿದ ಯುವತಿಗೆ ಹಾರ್ಟ್‌ ಅಟ್ಯಾಕ್‌

Hindu neighbor gifts plot of land

Hindu neighbour gifts land to Muslim journalist

Heart Attack: ಆಘಾತಕಾರಿ ಪ್ರಕರಣವೊಂದರಲ್ಲಿ, ಬ್ರೆಜಿಲ್‌ನ ಪರಾನಾ ಪ್ರದೇಶದಲ್ಲಿ 20 ವರ್ಷದ ಮಹಿಳೆಯೊಬ್ಬರು ಬಸ್‌ನಲ್ಲಿ ಕಳ್ಳ ಸಾಗಾಣೆ ಮಾಡುತ್ತಿದ್ದು, ಪ್ರಯಾಣ ಮಾಡುತ್ತಿದ್ದಾಗ 26 ಐಫೋನ್‌ಗಳನ್ನು ಕಟ್ಟಿಕೊಂಡಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದು ಪತ್ತೆಯಾಗಿದೆ.

ಗುವಾರಪುವಾ ಮೂಲಕ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಾವಿನ ಕಾರಣವನ್ನು ನಿರ್ಧರಿಸಲು ಪೊಲೀಸರು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿರುವುದರಿಂದ ಈಗ ಪೂರ್ಣ ತನಿಖೆ ನಡೆಯುತ್ತಿದೆ.

ಸ್ಥಳೀಯ ವರದಿಗಳ ಪ್ರಕಾರ, ಯುವತಿ ಪ್ರಯಾಣದ ಮಧ್ಯದಲ್ಲಿ ಉಸಿರಾಟದ ತೊಂದರೆ ಮತ್ತು ಸೆಳೆತ ಕಾಣಿಸಿಕೊಂಡಿದ್ದು, ಕೂಡಲೇ ಆಕೆಗೆ ಬಸ್‌ನಲ್ಲಿಯೇ ಚಿಕಿತ್ಸೆ ನೀಡಲಾಯಿತು. ಆದರೆ ಸ್ವಲ್ಪ ಸಮಯದ ನಂತರ ಹೃದಯ ಸ್ತಂಭನವಾಗಿದೆ. ವೈದ್ಯರು 45 ನಿಮಿಷಗಳ ಕಾಲ ಸತತವಾಗಿ ಆಕೆಯನ್ನುಜೀವಂತಗೊಳಿಸಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ.

ಮಹಿಳೆಯ ತನ್ನ ದೇಹಕ್ಕೆ 26 ಐಫೋನ್‌ಗಳನ್ನು ಅಂಟಿಸಿರುವುದನ್ನು ಮಿಲಿಟರಿ ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು. ವೈಜ್ಞಾನಿಕ ಪೊಲೀಸ್ ಮತ್ತು ನಾಗರಿಕ ಪೊಲೀಸರಿಂದ ವಿಧಿವಿಜ್ಞಾನ ತಂಡಗಳನ್ನು ಪರೀಕ್ಷೆಗಾಗಿ ಸ್ಥಳಕ್ಕೆ ಕರೆಸಲಾಯಿತು. ತನಿಖೆಯ ಸಮಯದಲ್ಲಿ ನಿಯೋಜಿಸಲಾದ ಸ್ನಿಫರ್ ನಾಯಿಗೆ ಆಕೆಯ ಬಳಿ ಯಾವುದೇ ಮಾದಕ ದ್ರವ್ಯಗಳ ಕುರುಹು ಕಂಡುಬಂದಿಲ್ಲ, ಆದರೆ ಆಕೆಯ ಲಗೇಜ್‌ನಲ್ಲಿ ಹಲವಾರು ಬಾಟಲಿ ಮದ್ಯ ಪತ್ತೆಯಾಗಿ ನಂತರ ವಶಪಡಿಸಿಕೊಳ್ಳಲಾಯಿತು.

“ಪರಾನಾ ಸಿವಿಲ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಸಾವಿನ ಕಾರಣವನ್ನು ಸ್ಪಷ್ಟಪಡಿಸಲು ವಿಧಿವಿಜ್ಞಾನ ವರದಿಗಳ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ” ಎಂದು ದಿ ಸನ್ ಉಲ್ಲೇಖಿಸಿದ ಹೇಳಿಕೆಯಲ್ಲಿ ಪರಾನಾ ಸಿವಿಲ್ ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಐಫೋನ್‌ಗಳನ್ನು ಬ್ರೆಜಿಲ್‌ನ ಫೆಡರಲ್ ಕಂದಾಯ ಸೇವೆಗೆ ಹಸ್ತಾಂತರಿಸಲಾಗಿದೆ. ಮಹಿಳೆಯ ಗುರುತು ಅಥವಾ ಕಳ್ಳಸಾಗಣೆಗೆ ಯಾವುದೇ ಸಂಭಾವ್ಯ ಸಂಪರ್ಕದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.