

Heart Attack: ಹೃದಯಾಘಾತ ಎನ್ನುವುದು ಇಂದು ಹದಿಹರೆಯದವರಿಂದ ಹಿಡಿದು ಮುದುಕರವರೆಗೆ ಸಂಭವಿಸುತ್ತಿದ್ದು, ಇದರಲ್ಲಿ ಶಾಲೆಗೆ ಹೋಗೋ ಮಕ್ಕಳು, ಯುವ ವಯಸ್ಸಿನವರೇ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ಕೊರೊನಾ ನಂತರ ಹೃದಯಾಘಾತ ಸಮಸ್ಯೆಗಳು ಹೆಚ್ಚಿದೆ. ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಬಾಂಗ್ಲಾದೇಶದ ಅಗ್ರ ಶ್ರೇಯಾಂಕಿತ ಚೆಸ್ ಗ್ರ್ಯಾಂಡ್ ಮಾಸ್ಟರ್ ಜಿಯಾವುರ್ ರಹಮಾನ್ (50) ಚೆಸ್ ಆಡುತ್ತಿದ್ದಾಗ ಕುಸಿದು ಸಾವಿಗೀಡಾಗಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯವು ಶುಕ್ರವಾರ ನಡೆದಿದ್ದು, ಇದರ ನಡುವೆ ಪಾರ್ಶ್ವವಾಯುವಿನಿಂದ ಕುಸಿದು ಬಿದ್ದಿದ್ದು, ನಂತರ ಮೃತ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಯಾವುರ್ ಅವರು ಚೆಸ್ ಆಡುತ್ತಿರುವಾಗಲೇ ಕುಸಿದು ಬಿದ್ದಿದು, ಆಟಗಾರರು, ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರಿಶೀಲನೆ ಮಾಡಿದ್ದು, ಅವರು ಮೃತ ಹೊಂದಿರುವುದಾಗಿ ಘೊಷಣೆ ಮಾಡಿದರು.













