Home News Kamal Hassan: ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ?: ‘ಥಗ್ ಲೈಫ್’ ಸಿನಿಮಾದ ಅರ್ಜಿ ವಿಚಾರಣೆ...

Kamal Hassan: ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ?: ‘ಥಗ್ ಲೈಫ್’ ಸಿನಿಮಾದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್

Hindu neighbor gifts plot of land

Hindu neighbour gifts land to Muslim journalist

Kamal Hassan: “ಕನ್ನಡ ಹುಟ್ಟಿದ್ದು ತಮಿಳಿನಿಂದ” ಎಂದಿದ್ದ ನಟ ಕಮಲ್ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೆ? ಎಂದು ‘ಥಗ್ ಲೈಫ್’ ಸಿನಿಮಾದ ರಿಲೀಸ್‌ಗೆ ಭದ್ರತೆ ಕೋರಿ ಕಮಲ್ ಹಾಸನ್ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ.ಈ ಪ್ರಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅರ್ಜಿ ಸಲ್ಲಿಕೆ ಮಾಡಿದ್ದು, ತಮ್ಮ ವಾದ ಕೇಳುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಸದ್ಯ ಈ ಪ್ರಕರಣದ ವಿಚಾರಣೆ ಜೂನ್ 20ಕ್ಕೆ ಮುಂದೂಡಿಕೆಯಾಗಿದೆ.

ಕೋರ್ಟ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್, ‘ಇಲ್ಲ ಕಮಲ್ ಹಾಸನ್ ಅವರು ಸ್ಟುಪಿಡ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ’ ಎಂದಿದ್ದಾರೆ. ಇದಕ್ಕೆ ಕಮಲ್ ಹಾಸನ್ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್ ಅವರು ‘ಸ್ಟುಪಿಡ್’ ಪದ ಬಳಕೆ ಮಾಡಿದ್ದಾರೆ. ಈ ಸಂಬಂಧ ‘ರಾಜ್ಕಮಲ್ ಫಿಲ್ಮ್’ ಪರ ವಕೀಲರು ಆಕ್ಷೇಪ ಹೊರಹಾಕಿದರು. ಆ ಬಳಿಕ ಸ್ಟುಪಿಡ್ ಹೇಳಿಕೆಗೆ ಸಾಹಿತ್ಯ ಪರಿಷತ್ ಪರ ವಕೀಲರು ವಿಷಾದ ವ್ಯಕ್ತಪಡಿಸಿದರು.

ಸಿನಿಮಾ ರಿಲೀಸ್ ಮಾಡಲ್ಲ..

ಕಮಲ್ ಹಾಸನ್ ಫಿಲ್ಮ್ಸ್, ಸದ್ಯದ ಮಟ್ಟಿಗೆ ಥಗ್‌ ಆಪ್‌ ಲೈಫ್ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಮೊದಲು ಹೇಳಿತ್ತು. ಈಗ ಮತ್ತದನ್ನೇ ಪುನರುಚ್ಛರಿಸಿದೆ. ಈ ಸಂದರ್ಭದಲ್ಲಿ ಮತ್ತೆ ಹೈಕೋರ್ಟ್ ವಿವೇಚನೆ ಬಳಸುವಂತೆ ಸಲಹೆ ನೀಡಿದೆ. ಹೀಗಾಗಿ, ಜೂನ್ 20ರವರೆಗೆ ರಾಜ್ಯದಲ್ಲಿ ಸಿನಿಮಾ ರಿಲೀಸ್ ಆಗೋದು ಡೌಟು.

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ವಿವಾದ ಸಂಬಂಧ ಇದೀಗ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಿಂದ ನೋಟೀಸ್ ಜಾರಿಯಾಗಿದೆ. ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಚಲನಚಿತ್ರ ಪ್ರದರ್ಶನದ ನಿಷೇಧವನ್ನು ಪ್ರಶ್ನಿಸಿ ಬೆಂಗಳೂರು ನಿವಾಸಿ ಮಹೇಶ್ ರೆಡ್ಡಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿವರಣೆ ಕೋರಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.