Home News ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | 102 ವರ್ಷದ ವೃದ್ಧ ಆರೋಪಿಗೆ 15 ವರ್ಷ ಜೈಲು...

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | 102 ವರ್ಷದ ವೃದ್ಧ ಆರೋಪಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ !!

Hindu neighbor gifts plot of land

Hindu neighbour gifts land to Muslim journalist

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 102 ವರ್ಷದ ವೃದ್ಧನಿಗೆ ಮಹಿಳಾ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಹಾಗೂ ರೂ. 5,000 ದಂಡವನ್ನು ವಿಧಿಸಿದ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ.

ಆರೋಪಿ ಕೆ. ಪರಶುರಾಮ್ ಅವರ ವಿರುದ್ಧ ಅವಾಡಿ ಆಲ್ ವುಮೆನ್ ಪೊಲೀಸರು 2018 ಜುಲೈನಲ್ಲಿ ಕೇಸ್ ದಾಖಲಿಸಿದ್ದರು. ಆಗ ಅವರಿಗೆ 99 ವರ್ಷ ವಯಸ್ಸಾಗಿತ್ತು. ಸರ್ಕಾರಿ ಶಾಲೆಯೊಂದರ ನಿವೃತ್ತ ಮುಖ್ಯೋಪಾಧ್ಯಾಯರಾಗಿರುವ ಪರಶುರಾಮನ್, ಸೆನ್ನೀರಕುಪ್ಪಂ ನಿವಾಸಿಯಾಗಿದ್ದು, ಐದು ಮನೆಗಳನ್ನು ಕಟ್ಟಿಸಿ, ಅವುಗಳನ್ನು ಲೀಸ್ ಗೆ ನೀಡಿದ್ದಾರೆ.

ಪರಶುರಾಮನ್ ಮನೆಯ ಮುಂದಿನ ಮನೆಯೊಂದರಲ್ಲಿ ಬಾಡಿಗೆಯಲ್ಲಿದ್ದ ದಂಪತಿಗೆ 10 ವರ್ಷದ ಬಾಲಕಿ ಇದ್ದಳು. ಜುಲೈ 16 ರಂದು ಆ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಶಾಲೆಯಲ್ಲಿ ಆಕೆ ಏನಾದರೂ ತಿಂದಿರಬಹುದೆಂದು ಪೋಷಕರು ವಿಚಾರಿಸಿದಾಗ, ಮುಂದಿನ ಮನೆಯ ವೃದ್ಧ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಬಾಲಕಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪೋಷಕರು, ವೃದ್ದನೊಂದಿಗೆ ಜಗಳವಾಡಿದ್ದರು ಎಂದು ಪ್ರಕರಣದ ವಿಚಾರಣೆ ನಡೆಸಿದ ಇನ್ಸ್ ಪೆಕ್ಟರ್ ಲತಾ ತಿಳಿಸಿದರು.

ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡ ನಂತರ ಪರಶುರಾಮನ್ ಅವರನ್ನು ಬಂಧಿಸಿ, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿತ್ತು. ಸುಮಾರು ಮೂರುವರೆ ವರ್ಷಗಳ ನಂತರ ನ್ಯಾಯಾಲಯ ವಿಚಾರಣೆ ನಡೆಸಿದ ನಂತರ ಆರೋಪಿ ಪರುಶುರಾಮ್ ಗೆ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ, ಸಂತ್ರಸ್ತೆಗೆ 45 ಸಾವಿರ ರೂ. ಪರಿಹಾರವನ್ನು ಪ್ರಕಟಿಸಿದೆ.