Home News Bigg Boss: ಬಿಗ್ ಬಾಸ್ ಗೆದ್ದ ಹನುಮಂತಗೆ ಸಿಗೋ ಹಣ 50 ಲಕ್ಷವಲ್ಲ, ಬರೀ 35...

Bigg Boss: ಬಿಗ್ ಬಾಸ್ ಗೆದ್ದ ಹನುಮಂತಗೆ ಸಿಗೋ ಹಣ 50 ಲಕ್ಷವಲ್ಲ, ಬರೀ 35 ಲಕ್ಷ!! ಯಾಕಾಗಿ?

Hindu neighbor gifts plot of land

Hindu neighbour gifts land to Muslim journalist

Bigg Boss: ಬರೋಬ್ಬರಿ 5.23 ಕೋಟಿ ಮತಗಳನ್ನು ಪಡೆದುಕೊಳ್ಳುವ ಮೂಲಕ ಹನುಮಂತು ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಬೆನ್ನಲ್ಲೇ ಹನುಮಂತ ಅವರಿಗೆ 50 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಆದರೆ, ಇದರಲ್ಲಿ ಸಂಪೂರ್ಣ ಮೊತ್ತ ಅವರಿಗೆ ಸಿಗೋದಿಲ್ಲ.

ಹೌದು, ಬಿಗ್ ಬಾಸ್ ಗೆದ್ದ ಹನುಮಂತಗೆ ಅದರ ಸಂಪೂರ್ಣ 50 ಲಕ್ಷ ಹಣ ಸಿಗುವುದಿಲ್ಲ. ಯಾಕಂದ್ರೆ ಬಿಗ್ ಬಾಸ್ ಗೆದ್ದ ಹಣಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಹೀಗಾಗಿ ಹನುಮಂತ ಅವರಿಗೆ ಕೇವಲ 35 ಲಕ್ಷ ರೂಪಾಯಿ ಮಾತ್ರ ಸಿಗುತ್ತದೆ.

ಎಷ್ಟು ತೆರಿಗೆ?
ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್​ ಗೇಮ್​ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ. ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್​ ಆದ ತ್ರಿವಿಕ್ರಂ ಅವರೂ ತೆರಿಗೆ ಹಣ ಪಾವತಿಸಬೇಕು.