Home News Hair Dryer Blast: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್: ಯೋಧನ ಪತ್ನಿಯ ಎರಡೂ ಕೈಗಳು...

Hair Dryer Blast: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್: ಯೋಧನ ಪತ್ನಿಯ ಎರಡೂ ಕೈಗಳು ಕಟ್

Hindu neighbor gifts plot of land

Hindu neighbour gifts land to Muslim journalist

Hair Dryer Blast: ಆರ್ಡರ್ ಮಾಡದೇ ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ (Hair Dryer Blast) ನಿಂದ ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್ಬಾಗಿರುವ ಘಟನೆ ಜಿಲ್ಲೆಯ ಇಳಕಲ್ (Ilkal) ನಗರದಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು.

ಶಶಿಕಲಾ ಎಂಬುವರ ಹೆಸರು ಮತ್ತು ನಂಬರ್ ಹೊಂದಿದ್ದ ಪಾರ್ಸಲ್ ಕೊರಿಯರ್‌ಯೊಂದು ಬಂದಿತ್ತು. ಶಶಿಕಲಾ ಅವರು ಕೂಡ ಮೃತ ಯೋಧನ ಪತ್ನಿಯಾಗಿದ್ದರು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನಿಗೆ ಕೊರಿಯರ್ ಅನ್ನು ಪಡೆದು ತೆಗೆದು ನೋಡಲು ತಿಳಿಸಿದ್ದರು. ತೆಗೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಲು ತಿಳಿಸಿದ್ದಾರೆ. ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ಹಿನ್ನೆಲೆ ಎರಡೂ ಕೈಗಳು ತುಂಡಾಗಿದ್ದು, ಬೆರಳುಗಳು ಛಿದ್ರ ಛಿದ್ರವಾಗಿ ತುಂಡಾಗಿದೆ. ಮನೆಯಲ್ಲಿ ರಕ್ತ ಚಿಮ್ಮಿದ್ದು, ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆಯಿಂದ ತಿಳಿದು ಬರಬೇಕಿದೆ.

ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಉತ್ಪಾದನೆಯಾಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ,ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.