Home News Gruhalakshmi Scheme: ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್: ಶೀಘ್ರದಲ್ಲೇ ಗೃಹಲಕ್ಷಿ ಯೋಜನೆ ಹಣ

Gruhalakshmi Scheme: ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್: ಶೀಘ್ರದಲ್ಲೇ ಗೃಹಲಕ್ಷಿ ಯೋಜನೆ ಹಣ

Hindu neighbor gifts plot of land

Hindu neighbour gifts land to Muslim journalist

Gruhalakshmi Scheme: ಗೃಹಲಕ್ಷ್ಮೀ ಯೋಜನೆಯ ಜುಲೈ ಮತ್ತು ಅಗಸ್ಟ್ ತಿಂಗಳ ಹಣ(Money) ಹಾಕಾಲಾಗಿದೆ. ಎರಡು ಕಂತಿನಲ್ಲಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. 7 ಮತ್ತು9 ನೇ ತಾರೀಕಿನಂದು ಹಣ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸುಮಾರು 5 ಸಾವಿರ ಕೋಟಿ ಹಣವನ್ನು ಗೃಹಲಕ್ಷ್ಮೀಗೆ ಸಂದಾಯ ಮಾಡಲಾಗಿದೆ. ಈವರೆಗೆ ಒಟ್ಟು 13 ತಿಂಗಳು ಹಣ ನೀಡಲಾಗಿದೆ ಎಂದರು.

ಸಚಿವರ ಭೂಹಗರಣ ಬಯಲಿಗೆಳೆಯುವ ಪೀ ರಾಜೀವ್ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿದ ಅವರು, ಆಧಾರ ರಹಿತ ಹೇಳಿಕೆಗೆ ಉತ್ತರಿಸುವ ಜರೂರತ್ ಇಲ್ಲ. ಯಾವಾಗ ಆಧಾರ ಸಹಿತ ಮಾತಾಡುತ್ತಾರೋ ಆಗ ಉತ್ತರಿಸುತ್ತೇನೆ. ಬಹಳ ಪ್ರೀ ಮೆಚ್ಯೂರ್ ಆಗುತ್ತದೆ ಇಂತಹ ಪ್ರಶ್ನೆಗೆ ಉತ್ತರ ಕೊಡಬೇಕಾಗಿಲ್ಲ ಎಂದರು.