Home News Gruhalakshmi amount: ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ನಿಮಗೂ ಹಣ ಬಂದಿದೆಯೇ, ಚೆಕ್ ಮಾಡಲು ಇಲ್ಲಿದೆ...

Gruhalakshmi amount: ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ನಿಮಗೂ ಹಣ ಬಂದಿದೆಯೇ, ಚೆಕ್ ಮಾಡಲು ಇಲ್ಲಿದೆ ಸುಲಭ ವಿಧಾನ

Gruhalakshmi scheme

Hindu neighbor gifts plot of land

Hindu neighbour gifts land to Muslim journalist

Gruhalakshmi amount: ಕರ್ನಾಟಕ ರಾಜ್ಯದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ರೂ.2000 ಹಣವನ್ನು ಪ್ರತಿ ತಿಂಗಳು ಮನೆ ಯಜಮಾನಿ ಖಾತೆಗೆ ಜಮೆ ಮಾಡಲಾಗುತ್ತದೆ. ಅಂತೆಯೇ ಇಂದು ಅಕ್ಟೊಬರ್ 7 ಮತ್ತು 9 ರಂದು ಹಣ ಬಿಡುಗಡೆ ಮಾಡಲಾಗುತ್ತದೆ.

ಆದ್ರೆ ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ ನಿಮಗೆ ಕಂತುಗಳು (Gruhalakshmi amount) ಬಂದಿರಬಹುದು ಒಂದು ವೇಳೆ ಬಂದರೂ ಕೂಡ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರದೆ ಇರಬಹುದು. ಅದಕ್ಕಾಗಿ ಗೃಹಲಕ್ಷ್ಮಿ ಹಣದ ವಿತರಣಾ ಪಟ್ಟಿಯನ್ನು ಆನ್ಲೈನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಕಂಡಿತವಾಗಿ ಹಣ ಬರುತ್ತದೆ ಎಂದು ತಿಳಿಯಬಹುದು.

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮಗೆ ಬಂದಿದೆಯೇ ಎಂದು ಈ ರೀತಿ ಚೆಕ್‌ ಮಾಡಿ:

1:ಈ ಲಿಂಕ್‌ ಮೇಲೆ Gruhalakshmi amount status ಕಿಕ್ಲ್‌ ಮಾಡಿ ಗೂಗಲ್‌ ಪ್ಲೇ ಸ್ಟೋರ್‌ ಪ್ರವೇಶ ಮಾಡಿ ಅಧಿಕೃತ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರ ತಿಳಿಯಲು ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್‌ ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಬೇಕು.

2: ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಿಕೊಂಡ ನಂತರ ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಶನ್‌ ಓಪನ್ ಮಾಡಿ ಮೊದಲಿಗೆ ಅರ್ಜಿದಾರರ ಆಧಾರ್‌ ಕಾರ್ಡ ಸಂಖ್ಯೆಯನ್ನು ಹಾಕಿ ಬಳಕೆದಾರರ ರಿಜಿಸ್ಟರ್ ಮಾಡಿಕೊಳ್ಳಬೇಕು.

ಇದಕ್ಕಾಗಿ ಆಧಾರ್‌ ಕಾರ್ಡ ನಂಬರ್‌ ಹಾಕಿ ನಂತರ ಆಧಾರ್‌ ನಲ್ಲಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ(OTP) ನ್ನು ನಮೂದಿಸಿ ತದನಂತರ ಈ ಅಪ್ಲಿಕೇಶನ್‌ ಗೆ ನಾಲ್ಕು ಅಂಕಿಯ ಪಾಸ್ವರ್ಡ(Password) ಅನ್ನು ರಚನೆ ಮಾಡಿಕೊಳ್ಳಬೇಕು.

3:ಈ ಅಪ್ಲಿಕೇಶನ್ ಅನ್ನು ತೆರೆಯಲು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್(Login) ಬಟನ್ ಮೇಲೆ ಕ್ಲಿಕ್ ಮಾಡಬೇಕು.

4:ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ನ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಮೊದಲಿಗೆ ಕಾಣುವ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ(Gruhalakshmi) “ಗೃಹಲಕ್ಷ್ಮಿ” ಎಂದು ತೋರಿಸುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕದಂದು ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಜೊತೆಗೆ ಹಣ ಜಮಾ ಅದ ಬ್ಯಾಂಕ್ ಹೆಸರು, ಯು.ಟಿ.ಆರ್(UTR) ನಂಬರ್ ಮತ್ತು ಫಲಾನುಭವಿ ಖಾತೆಯ ಹೆಸರು ಕಾಣುತ್ತದೆ.