Home News Gruhajyoti: ಬಾಡಿಗೆದಾರರಿಗೆ ತಟ್ಟಲಿದೆ ಗೃಜಹ್ಯೋತಿ ಸ್ಕೀಮ್‌; ಫ್ರೀ ಆಫರ್‌ ಮುಗಿತಾ? ಕರೆಂಟ್‌ ಬಿಲ್‌ ಕಟ್ಟಲು ರೆಡಿಯಾಗಿ

Gruhajyoti: ಬಾಡಿಗೆದಾರರಿಗೆ ತಟ್ಟಲಿದೆ ಗೃಜಹ್ಯೋತಿ ಸ್ಕೀಮ್‌; ಫ್ರೀ ಆಫರ್‌ ಮುಗಿತಾ? ಕರೆಂಟ್‌ ಬಿಲ್‌ ಕಟ್ಟಲು ರೆಡಿಯಾಗಿ

Gruhajyoti

Hindu neighbor gifts plot of land

Hindu neighbour gifts land to Muslim journalist

Gruhajyoti: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಗೃಹಜ್ಯೋತಿ ಗ್ಯಾರಂಟಿ ಯೋಜನೆಯು ಇದೀಗ ಮನೆ ಬದಲಾಯಿಸುತ್ತಿರುವ ಬಾಡಿಗೆದಾರರಿಗೆ ಟೆನ್ಶನ್‌ ತಂದಿದೆ. ಹಳೇ ಮನೆಯಲ್ಲಿ ನೋಂದಣಿಯಾದ ಆಧಾರ್‌ ಸಂಖ್ಯೆ ಡಿ-ಲಿಂಕ್‌ ಆಗದೇ ಇರುವುದು ಇದೀಗ ಹೊಸ ಸಮಸ್ಯೆಯನ್ನು ಉಂಟು ಮಾಡಿದೆ.

ಒಂದು ಕುಟುಂಬದಲ್ಲಿ ಹಲವು ಮಂದಿ ಫಲಾನುಭವಿಗಳಿದ್ದು, ಇದು ಸರಕಾರದ ಲೆಕ್ಕಾಚಾರವನ್ನು ತಲೆಬುಡ ಮಾಡುತ್ತಿದೆ. ಜೊತೆಗೆ ಹೊಸ ಮನೆಗೆ ಹೋದಾಗ ಬಾಡಿಗೆದಾರರಿಗೆ “ಸರಾಸರಿ” ಹೊಡೆತ ಸಮಸ್ಯೆಯುಂಟಾಗಿದೆ.

ಒಂದು ಕಡೆ ಬಾಡಿಗೆ ಮನೆಯಲ್ಲಿದ್ದವರು ಈಗಾಗಲೇ ಶೂನ್ಯ ಬಿಲ್‌ ಪಡೆಯುತ್ತಿದ್ದು, ಇನ್ನೊಂದು ಕಡೆ ಬಾಡಿಗೆಗೆ ಹೋದಾಗ ಸಮಸ್ಯೆ ಉಂಟಾಗುತ್ತಿದೆ. ಗ್ಯಾರಂಟಿ ಯೋಜನೆಯಲ್ಲಿ ಆರ್. ಆರ್‌ ಸಂಖ್ಯೆಯೊಂದಿಗೆ ಒಮ್ಮೆ ಆಧಾರ್‌ ಜೋಡನೆ ಮಾಡಿದರೆ, ಅದನ್ನು ಮತ್ತು ಕಡಿತಗೊಳಿಸಿ (ಡಿ-ಲಿಂಕ್‌) ಹೊಸದಾಗಿ ಬಾಡಿಗೆಗೆ ಹೋದ ಮನೆಯ ಆರ್. ಆರ್‌ ಸಂಖ್ಯೆಗೆ ಲಿಂಕ್‌ ಮಾಡಲು ಅವಕಾಶವಿಲ್ಲ.

ಅಷ್ಟು ಮಾತ್ರವಲ್ಲದೇ ಹೊಸದಾಗಿ ಬಾಡಿಗೆಗೆ ಹೋಗುವವರು ಹಿಂದಿನ ಗ್ರಾಹಕ ಬಳಕೆ ಮಾಡುತಿದ್ದ ಸರಾಸರಿ ಮಿತಿಯನ್ನು ಅನುಸರಿಸಬೇಕಾಗಿದ್ದು, ಒಂದು ವೇಳೆ ಮಿತಿ ಮೀರಿದರೆ ಶೂನ್ಯ ಬಿಲ್‌ ಬರುವುದಿಲ್ಲ.

ಈಗ ನೀವೇನಾದರೂ ಕಾರಣಾಂತರದಿಂದ ಮನೆ ಬದಲಾವಣೆ ಮಾಡುತ್ತೀರಿ. ಆ ಬಾಡಿಗೆ ಮನೆಯಲ್ಲಿ ಮೊದಲೇ ಇದ್ದವರು ಇದ್ದು ಹೋಗಿರುತ್ತಾರೆ. ಆಗ ಆ ಆರ್.ಆರ್‌ ಸಂಖ್ಯೆಗೆ ಅವರ ಆಧಾರ್‌ ಜೋಡಣೆ ಆಗಿರುತ್ತದೆ. ಅವರ ಸರಾಸರಿ ಬಳಕೆ ಪ್ರಮಾಣ 100 ಯೂನಿಟ್‌ ಇದೆ ಎಂದು ಅಂದಾಜು ಮಾಡಿದರೆ, ಆಗ ಆ ಬಾಡಿಗೆ ಮನೆಗೆ ಬಂದವರು ಕೂಡಾ 100 ಯೂನಿಟ್‌ಗೆ ಸೀಮಿತಗೊಳಿಸಬೇಕಾಗುತ್ತದೆ.

ಇದೀಗ ಈ ಸಮಸ್ಯೆ ಬೆಂಗಳೂರು ಸೇರಿ ಹಲವು ಮಹಾನಗರಗಳಲ್ಲಿ ಕಾಡಿದೆ. ಮಕ್ಕಳ ಶಾಲೆ, ಪೋಷಕರ ವರ್ಗಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಅದಲು-ಬದಲು ಆಗಿದೆ. ಇದೀಗ ಸಮಸ್ಯೆಯಾಗಿ ಕಾಡಿದೆ.

ಮತ್ತೊಂದು ಸಮಸ್ಯೆ ಏನೆಂದರೆ ನೂತನ ಸಂಪರ್ಕ ಇರುವ ಮನೆಗೆ ಹೋದರೂ ಈ ಹಿಂದೆ ವಾಸವಿದ್ದ ಮನೆಗೆ ಆಧಾರ್‌ ಸಂಖ್ಯೆ ಲಿಂಕ್‌ ಆಗಿರುವುದರಿಂದ ಆ ವ್ಯಕ್ತಿಯ ಆಧಾರ್‌ ಲಿಂಕ್‌ ಆಗುವುದಿಲ್ಲ. ಹೀಗಾಗಿ ಕುಟುಂಬದ ಇನ್ನೊಬ್ಬ ಸದಸ್ಯರ ಆಧಾರ್‌ ಕಾರ್ಡ್‌ ಬೇಕಾಗುತ್ತದೆ.

Udupi: ಪೇಜಾವರಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್‌ ರಾಮಚಂದ್ರ ಭಟ್‌ ವಿಧಿವಶ