Home News Gowtham Gambhir: ಟೀಮ್ ಇಂಡಿಯಾಗೆ ಸಾಲು ಸೋಲು – ಮುಖ್ಯ ಕೋಚ್ ಹುದ್ದೆಯಿಂದ ಗಂಭೀರ್ ವಜಾ?

Gowtham Gambhir: ಟೀಮ್ ಇಂಡಿಯಾಗೆ ಸಾಲು ಸೋಲು – ಮುಖ್ಯ ಕೋಚ್ ಹುದ್ದೆಯಿಂದ ಗಂಭೀರ್ ವಜಾ?

Hindu neighbor gifts plot of land

Hindu neighbour gifts land to Muslim journalist

Gowtham Gambhir: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯನ್ನು 2-0 ಅಂತರದಿಂದ ಸೋತ ಬಳಿಕ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ವಿರುದ್ದ ಅಸಮಾಧಾನದ ಕಿಚ್ಚು ಹೆಚ್ಚಾಗಿದೆ. ಈ ನೆಲೆಯಲ್ಲಿ ಭಾರತದ ಕ್ರಿಕೆಟ್ ತಂಡದ ಕೋಚ್ ನಿಂದ ಗೌತಮ್ ಗಂಭೀರ್ ಅವರು ವಜಾ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯಸ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2 ಅಂತರದ ಹೀನಾಯ ಸೋಲಿನ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಭಾರತ ಎರಡನೇ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಕಳೆದುಕೊಂಡ ನಂತರ ಗಂಭೀರ್ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಮುಖ್ಯ ಕೋಚ್‌ ಗೌತಮ್ ಗಂಭೀರ್ ಹುದ್ದೆ ತೊರೆಯುವ ಸಾಧ್ಯತೆ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ.

ಆದರೆ ಸದ್ಯಕ್ಕೆ ನಾವು ಗೌತಮ್ ಗಂಭೀರ್ ಅವರನ್ನು ಬದಲಾಯಿಸಲು ನೋಡುತ್ತಿಲ್ಲ. ಅವರು ತಂಡವನ್ನು ಪುನರ್ನಿರ್ಮಿಸುತ್ತಿದ್ದಾರೆ. ಅವರ ಒಪ್ಪಂದವು 2027 ರ ವಿಶ್ವಕಪ್ ವರೆಗೆ ಇರುತ್ತದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಎನ್‌ ಡಿಟಿವಿ ವರದಿ ಮಾಡಿದೆ.