Home News Spain: ಸಮುದ್ರಲ್ಲಿ ಸುಸ್ಸು ಮಾಡಿದ್ರೆ 67,000 ರೂ ದಂಡ ಎಂದ ಸರ್ಕಾರ – ಉಚ್ಚೆ...

Spain: ಸಮುದ್ರಲ್ಲಿ ಸುಸ್ಸು ಮಾಡಿದ್ರೆ 67,000 ರೂ ದಂಡ ಎಂದ ಸರ್ಕಾರ – ಉಚ್ಚೆ ಹುಯ್ದವನ ಪತ್ತೆ ಹೇಗ್ ಮಾಡ್ತೀರಪ್ಪಾ ಎಂದ ನೆಟ್ಟಿಗರು !!

Spain

Hindu neighbor gifts plot of land

Hindu neighbour gifts land to Muslim journalist

Spain: ಪ್ರವಾಸಿಗರೆ ಹುಷಾರ್, ಇನ್ಮುಂದೆ ಒಮ್ಮೆ ಯೋಚಿಸಿ ಸಮುದ್ರಕ್ಕೆ ಇಳಿಯಿರಿ. ಯಾಕೆಂದರೆ ಮೋಜು-ಮಸ್ತಿ ಮಾಡಲು ಸಮುದ್ರಕ್ಕಿಳಿದು ಅದರಲ್ಲೇ ಏನಾದ್ರೂ ಸುಸ್ಸು(urination) ಮಾಡಿದರೆ ಬೀಳುತ್ತೆ 67,000ರೂ ದಂಡ !!

Darshan: ಬಚಾವ್ ಮಾಡಲು ದರ್ಶನ್ ಗೆ ಹೊಸ ಷರತ್ತು ವಿಧಿಸಿದ ಕುಟುಂಬಸ್ಥರು, ಆಪ್ತರು ಹಾಗೂ ಪ್ರಭಾವಿಗಳು !! ಏನದು? ದರ್ಶನ್ ಒಪ್ಪಬಹುದೇ?

ಅರೆ, ಏನಪ್ಪಾ ಇದು ಇಂತಾ ರೂಲ್ಸ್ ಆ? ಎಂದು ಗಾಬರಿ ಬೀಳಬೇಡಿ. ಯಾಕೆಂದರೆ ಇದು ನಮ್ಮ ದೇಶದಲ್ಲಿ ಜಾರಿಯಾದ ನಿಯಮವಲ್ಲ. ಬದಲಿಗೆ ವಿದೇವದಲ್ಲಿ. ಹೌದು, ಈ ನಿಯಮ ಜಾರಿಯಾಗಿರುವುದು ಸ್ಪೇನ್‌ನ(Spain) ಮಾರ್ಬೆಲ್ಲಾದಲ್ಲಿ. ಪ್ರವಾಸಿ ತಾಣದ ಬೀಚ್‌ಗಳ ಶುಚಿತ್ವ ಕಾಪಾಡಲು ಈ ಹೊಸ ನಿಮಯ ಜಾರಿಗೆ ತರಲಾಗಿದ್ದು ಸಮುದ್ರದಲ್ಲಿ ಆಟವಾಡುತ್ತಾ, ಬೀಚ್ ಬದಿಯಲ್ಲಿ, ಅಥವಾ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ ಬರೋಬ್ಬರಿ 67,000 ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, 2ನೇ ಬಾರಿ ಈ ತಪ್ಪು ಮಾಡಿದರೆ 1 ಲಕ್ಷ ರೂಪಾಯಿ ದಂಡ ಕೂಡ ಬೀಳುತ್ತೆ!!

ಅಂದಹಾಗೆ ಸುಂದರ ಬೀಚ್‌ಗಳನ್ನು ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬುತ್ತಾರೆ. ವೀಕೆಂಡ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರವಾಸಿಗರು ತುಂಬುತ್ತಾರೆ. ಆದರೆ ಬೀಚ್‌ನಲ್ಲಿ ಆಟವಾಡುತ್ತಾ ಕಾಲಕಳೆಯುವ ಪ್ರವಾಸಿಗರು, ಸಮುದ್ರ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರಿನ ಶುಚಿತ್ವ, ಹೈಜೀನ್ ಸಮಸ್ಯೆಯಾಗುತ್ತಿದೆ. ಹಲವರು ಪ್ರವಾಸಿಗರು ಈ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಮಾರ್ಬೆಲ್ಲಾ ನಗರ ಕಠಿಣ ನಿಯಮ ಜಾರಿಗೊಳಿಸಿದ್ದು ಸ್ಥಳೀಯ ಕೋಸ್ಟಲ್ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ.

ಆದರೆ ಈ ನಿಯಮ ಜಾರಿಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕಿಕ್ಕಿರಿದು ಸೇರಿದ ಜನಸಂದಣಿಯಲ್ಲಿ ಸಮುದ್ರದ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಯಾರು ಅನ್ನೋದು ಪತ್ತೆ ಹಚ್ಚುವುದು ಹೇಗೆ? ಬೀಚ್ ನೀರಿನೊಳಗೆ ನಿಂತು ಮೂತ್ರ ವಿಸರ್ಜನೆ ಮಾಡಿದರೆ ಹೇಗೆ ಪತ್ತೆ ಹಚ್ಚುತ್ತೀರಪ್ಪಾ? ಎಂದು ತರಹೇವಾರಿ ಕಮೆಂಟ್ ಮಾಡಿ, ಹೊಸ ನಿಯಮವನ್ನು ಟೀಕಿಸುತ್ತಿದ್ದಾರೆ.

Uttara Pradesh: ಶಾಲೆಯಲ್ಲಿ ಟೀಚರ್‌-ಪ್ರಿನ್ಸಿಪಾಲ್‌ ನಡುವೆ ರೋಮ್ಯಾನ್ಸ್‌; ವೀಡಿಯೋ ವೈರಲ್‌