Home News Gruhalakshmi Scheme : ತಾಳ್ಮೆ ಕಳೆದುಕೊಂಡ ಸರ್ಕಾರ- ಈ ಮಹಿಳೆಯರನ್ನು ‘ಗೃಹಲಕ್ಷ್ಮೀ’ಯಿಂದ ಹೊರಗಿಡಲು ನಿರ್ಧಾರ, BPL...

Gruhalakshmi Scheme : ತಾಳ್ಮೆ ಕಳೆದುಕೊಂಡ ಸರ್ಕಾರ- ಈ ಮಹಿಳೆಯರನ್ನು ‘ಗೃಹಲಕ್ಷ್ಮೀ’ಯಿಂದ ಹೊರಗಿಡಲು ನಿರ್ಧಾರ, BPL ಕಾರ್ಡ್ ನಿಂದ ಹೆಸರು ಕೂಡ ಡಿಲೀಟ್ !!

Gruhalakshmi Scheme

Hindu neighbor gifts plot of land

Hindu neighbour gifts land to Muslim journalist

Gruhalakshmi : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖವಾಗಿರುವ ಯೋಜನೆ ‘ಗೃಹಲಕ್ಷ್ಮಿ ಯೋಜನೆ'(Gruhalakshmi Scheme). ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮೆಯಾಗುತ್ತಿದೆ. ಸರ್ಕಾರವು ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು ಕೆಲವು ಯಜಮಾನಿಯರನ್ನು ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡುವ ಪ್ಲಾನ್ ಮಾಡಿದೆ.

ಹೌದು, ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಬಿದ್ದಿದ್ದು, ಕೆಲ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ. ಕಾರಣ ರಾಜ್ಯಾದ್ಯಂತ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆಯುತ್ತಿದ್ದು, ಶೇ.80ರಷ್ಟು ಕುಟುಂಬಗಳು ಬಿಪಿಎಲ್‌ ಅಡಿಯಲ್ಲಿವೆ. 1.27 ಕೋಟಿ ಬಿಪಿಎಲ್‌ ಕುಟುಂಬಗಳಿವೆ. ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್‌ ಕಾರ್ಡ್‌ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು? ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಅಲ್ಲದೆ ತಮಿಳುನಾಡಿನಲ್ಲಿ(Tamilunadu) ಬಿಪಿಎಲ್‌(BPL) ಪ್ರಮಾಣ ಶೇ. 40ರಷ್ಟಿದೆ. ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಇದೇ ರೀತಿ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನು ಸರ್ಕಾರದ ಆದೇಶದ ಬೆನ್ನಲ್ಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅನರ್ಹ ಫಲಾಭವಿಗಳನ್ನು ಪತ್ತೆ ಹಚ್ಚಲು ತಯಾರಿ ನಡೆಸಿದೆ. ಇದರಲ್ಲಿ ಅನರ್ಹರು ಪತ್ತೆಯಾದರೆ ಅಂದಾಜು 20 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಬಹುದು ಎಂದು ಹೇಳಲಾಗ್ತಿದೆ

ಅಂದಹಾಗೆ ಈಗಾಗಲೇ ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೂ ಆದಾಯ ತೆರಿಗೆ ಪಾವತಿಸುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸದ್ಯ ಇಂತಹ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಹೀಗೆ ಪತ್ತೆಯಾದವರಲ್ಲಿ ಆದಾಯ ತೆರಿಗೆ ಪಾವತಿಸದ ಕುರಿತು ದೃಢೀಕರಣ ಪತ್ರ ತರಲು ಕೇಳಿದ್ದೆವು. 1.78 ಲಕ್ಷ ಮಂದಿ ಪೈಕಿ 6 ಸಾವಿರಕ್ಕೂ ಹೆಚ್ಚು ಮಂದಿ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಇದೀಗ ಇವರನ್ನು ಯೋಜನೆಗೆ ಪರಿಗಣಿಸಲಾಗುವುದು, ಇವರನ್ನು ಬಿಟ್ಟು ಉಳಿದವರನ್ನೆಲ್ಲಾ ಹೊರ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಇನ್ನೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವ ಮಹಿಳೆಯರಿಗೂ ಇನ್ಮುಂದೆ ಗೃಹ ಲಕ್ಷ್ಮಿ ಹಣ ಬರುವುದಿಲ್ಲ ಎನ್ನಲಾಗಿದೆ. ಈ ಮೂಲಕ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ನೀಡಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಂಡ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಸ್ಥಗಿತವಾಗಲಿದೆ. ಗೃಹಲಕ್ಷ್ಮಿ ಯೋಜನೆಗೆ ಮುಖ್ಯವಾಗಿ ಬಿಪಿಎಲ್‌ ಕಾರ್ಡ್‌ ಕಡ್ಡಾಯವಾಗಿದ್ದು, ಬಿಪಿಎಲ್‌ ಕಾರ್ಡ್‌ ರದ್ದಾದ್ದರೆ ಗೃಹಲಕ್ಷ್ಮಿ ಹಣವೂ ರದ್ದಾಗೋದು ಪಕ್ಕಾ ಆಗಿದೆ.

Viral News: ತೂಕ ಇಳಿಕೆಯ ಆಸೆ; ಅಸ್ಥಿಪಂಜರದಂತಾದ ಯುವತಿ