Home News Arun yogiraj: ರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್’ಗೆ ಸರ್ಕಾರದಿಂದ ಬಿಗ್ ಶಾಕ್- 12 ಲಕ್ಷ...

Arun yogiraj: ರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್’ಗೆ ಸರ್ಕಾರದಿಂದ ಬಿಗ್ ಶಾಕ್- 12 ಲಕ್ಷ ಕೊಡದೆ ಬಾಕಿ ಉಳಿಸಿಕೊಂಡಿರೋ ಗೌರ್ಮೆಂಟ್!!

Arun yogiraj

Hindu neighbor gifts plot of land

Hindu neighbour gifts land to Muslim journalist

Arun yogiraj: ಅಯೋಧ್ಯೆಯ ರಾಮನ ಮೂರ್ತಿಯನ್ನು ಕೆತ್ತಿರುವ ಅರುಣ್ ಯೋಗಿರಾಜ್ ಅವರಿಗೆ ರಾಜ್ಯ ಸರ್ಕಾರ ಭಾರಿ ನಿರಾಸೆ ಉಂಟು ಮಾಡಿದೆ. ಏಕೆಂದರೆ ಸುಮಾರು 8 ವರ್ಷಗಳಿಂದಲೂ ಅವರಿಗೆ ನೀಡಬೇಕಾದ 12 ಲಕ್ಷ ರೂಪಾಯಿಗಳನ್ನು ಇದುವರೆಗೂ ಬಾಕಿ ಉಳಿಸಿಕೊಂಡಿದೆ.

https://x.com/BasanagoudaBJP/status/1750762927605379334?t=mfIgw0euRZZfg0gc2_dIDw&s=08

ಇದನ್ನೂ ಓದಿ: Basavanagouda yatnal: ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್’ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ!!

ಹೌದು, ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್(Arun yogiraj) ಅವರಿಗೆ ಸೂಕ್ತ ಗೌರವ ಕೊಡದೇ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಘಟನೆ ಸಾಕ್ಷಿಯಾಗಿದೆ. ಇಡೀ ದೇಶವೇ ಕೊಂಡಾಡುವಂತಹ ನಮ್ಮ ರಾಜ್ಯದ ಹೆಮ್ಮೆಯ ಶಿಲ್ಪಿಗೆ ನಮ್ಮ ರಾಜ್ಯ ಸರ್ಕಾರವೇ ಸರಿಯಾದ ಮನ್ನಣೆ ನೀಡದೆ ದೊಡ್ಡ ಮಟ್ಟದಲ್ಲಿ ಅವಮಾನ ಮಾಡಿದೆ.

12 ಬಾಕಿ ಉಳಿಸಿಕೊಂಡ ಸರ್ಕಾರ!!

ಮೈಸೂರಿನ ಅರುಣ್ ಯೋಗಿರಾಜ್ ಅವರಿಗೆ ಮೂರ್ತಿ ಕೆತ್ತನೆ ಮಾಡಿಕೊಡುಂತೆ ಸ್ವತಃ ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಕೊಡಲಾಗಿತ್ತು. ಅಂತೆಯೇ ಅರುಣ್

ಅವರು 2016 ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಕೆತ್ತಿದ್ದರು. ಆದರೆ, ಈ ಮೂರ್ತಿ ಕತ್ತನೆಯಾಗಿ ಹಾಗೂ ಪ್ರತೊಷ್ಠಾಪನೆಗೊಂಡು 8 ವರ್ಷಗಳು ಕಳೆದರೂ ಸಹ, ಇವರಿಗೆ ಸರ್ಕಾರದಿಂದ ಇನ್ನೂ ಹಣವನ್ನೇ ಕೊಟ್ಟಿಲ್ಲ. ಮೂರ್ತಿ ಕೆತ್ತನೆಯಾಗಿ ಪ್ರತಿಷ್ಠಾಪನೆಗೊಂಡ ನಂತರ ಇವರ ಕಾರ್ಯವನ್ನೇ ಮರೆತಿದೆ. ಇದೀಗ ಹಣ ಕೊಡಲು ಸತಾಯಿಸುತ್ತಿದೆ.

ಈ ಕುರಿತಂತೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಟ್ವೀಟ್ ಮಾಡಿದ್ದು, ‘ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನು ಅರುಣ್ ಯೋಗಿರಾಜ್ ಅವರು 2016 ರಲ್ಲೇ ಕೆತ್ತಿದ್ದರು. 8 ವರ್ಷಗಳು ಆದರೂ ಸಹ, ಮೈಸೂರು ಮಹಾನಗರ ಪಾಲಿಕೆಯವರು ಇವರಿಗೆ ಹಣ ಕೊಡದೆ ಸತಾಯಿಸುತ್ತಿರುವುದು ತರವಲ್ಲ. ಇದು ಒಬ್ಬ ಶಿಲ್ಪಿಗೆ ಅಲ್ಲದೆ, ಮೈಸೂರನ್ನು ಬೆಳಗಿದ ಯದುವಂಶದ ಅರಸರಿಗೆ ಮಾಡುವ ಅವಮಾನ. ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇದೆ ಜಿಲ್ಲೆಯವರೇ ಆದ ಸನ್ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಅರುಣ್ ಯೋಗಿರಾಜರಿಗೆ ಕೊಡಬೇಕಾದ ಮೊತ್ತವನ್ನು ಗೌರವಯುತವಾಗಿ ಹಾಗೂ ತುರ್ತಾಗಿ ಕೊಡಬೇಕು’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.