Home News ರೈತರಿಗೆ ಬಿಗ್‌ಶಾಕ್‌ ನೀಡಿದ ಸರಕಾರ, ಶಾಶ್ವತ ಕೃಷಿ ವಲಯ ಘೋಷಣೆ

ರೈತರಿಗೆ ಬಿಗ್‌ಶಾಕ್‌ ನೀಡಿದ ಸರಕಾರ, ಶಾಶ್ವತ ಕೃಷಿ ವಲಯ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಕೆಐಎಡಿಬಿಗೆ ನೀಡಿದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಸರಕಾರ ಘೋಷಿಸಿದ್ದು, ಜಮೀನು ಮಾರುವುದಾದರೆ ಸರಕಾರಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಯಾರಿಗೂ ಮಾರುವಂತಿಲ್ಲ ಎಂದು ಸರಕಾರ ಹೇಳಿದ್ದು. ಇದನ್ನು ರೈತ ಸಂಘಟನೆಗಳು ರೈತರ ವಿರುದ್ಧ ಸೇಡಿನ ಕ್ರಮ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧೀ ಹೋರಾಟಗಾರರ ಸಾವಿರ ದಿನಗಳ ಹೋರಾಟದ ನಂತರ ಭೂಮಿ ಮಾರಾಟ ಮಾಡುವ ರೈತರ ಸ್ವಾಯತ್ತತೆಯನ್ನು ಸರಕಾರ ಕಸಿದುಕೊಳ್ಳಲು ಮುಂದಾಗಿದೆ.

ಕೆಐಎಡಿಬಿಗೆ ನೀಡದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಸರಕಾರ ಘೋಷಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಸುಮಾರು 177 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿತ್ತು. ರೈತರ ಇದರ ವಿರುದ್ಧ 1192 ದಿನ ಹೋರಾಟ ಮಾಡಿದ್ದು, ನಂತರ ಸರಕಾರ ಇದಕ್ಕೆ ಮಣಿದಿದ್ದು, ಭೂಸ್ವಾಧೀನ ಅಧಿಸೂಚನೆ ವಾಪಸ್‌ ಪಡೆಯುವುದಾಗಿ ಘೋಷಣೆ ಮಾಡಿತ್ತು. ಇದನ್ನು ಸಿದ್ದರಾಮಯ್ಯನವರು ಪ್ರಕಟ ಮಾಡಿದ್ದರು.

ಆದರೆ ನಂತರ ಸರಕಾರ ಕೆಐಎಡಿಬಿಗೆ ನೀಡದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಣೆ ಮಾಡಿದೆ. ಈ ಜಮೀನನ್ನು ಸರಕಾರಕ್ಕೆ ನೀಡುವುದಾದರೆ ಮೂರು ತಿಂಗಳೊಳಗೆ ನೀಡಬಹುದು. ಇಲ್ಲವಾದಲ್ಲಿ ಈ ಜಮೀನನ್ನು ಯಾರಿಗೂ ಮಾರಾಟ ಮಾಡುವಂತಿಲ್ಲ. ಶಾಶ್ವತ ಕೃಷಿ ವಲಯವಾಗಿ ಮಾರ್ಪಾಡಾಗಲಿದೆ ಎಂದು ಆದೇಶಿಸಿದೆ.