Home News Google Play store ಮಹತ್ವದ ಮಾಹಿತಿ | 12 ಜನಪ್ರಿಯ ಆ್ಯಪ್‌ ಡಿಲೀಟ್‌ ಮಾಡಲು ಬಂದಿದೆ...

Google Play store ಮಹತ್ವದ ಮಾಹಿತಿ | 12 ಜನಪ್ರಿಯ ಆ್ಯಪ್‌ ಡಿಲೀಟ್‌ ಮಾಡಲು ಬಂದಿದೆ ಸೂಚನೆ !

Hindu neighbor gifts plot of land

Hindu neighbour gifts land to Muslim journalist

ಸದ್ಯ ಜನರನ್ನು ಮರುಳು ಮಾಡೋದಕ್ಕೆ ಎಲ್ಲಾ ರೀತಿಯ ವೇದಿಕೆಯೂ ಸಮಾಜದಲ್ಲಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಮೋಸದ ಜಾಲಕ್ಕೆ ಬೀಳಿಸೋದು ಹೆಚ್ಚೇ ಇದೆ. ಇದೀಗ ಅಂತಹ ಮೋಸದ ಬಲೆಗೆ ಬೀಳೀಸುವ 12 ಜನಪ್ರಿಯ ಆ್ಯಪ್‌ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲೀಟ್ ಮಾಡಲು ಸೂಚನೆ ನೀಡಿದೆ.

ಬಳಕೆದಾರರನ್ನು ವಂಚಿಸುವ ಇಂತಹ ಆ್ಯಪ್‌ಗಳನ್ನು ಗೂಗಲ್ ಪ್ರತಿ ಬಾರಿ ಬ್ಯಾನ್ ಮಾಡುತ್ತಲೇ ಬರುತ್ತಿದೆ. ಇದೀಗ ಬಳಕೆದಾರರಿಗೆ ಅಪಾಯ ಉಂಟುಮಾಡುವ 12 ಜನಪ್ರಿಯ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ನಿಷೇಧಿಸಿದೆ. ಈ ಆ್ಯಪ್‌ ಗಳು ಹೆಚ್ಚು ಗೇಮಿಂಗ್ ಹಾಗೂ ಫಿಟ್ನೆಸ್ ಆ್ಯಪ್‌ಗಳಾಗಿದೆ. ಈ ಜನಪ್ರಿಯ ಆ್ಯಪ್‌ಗಳು ಹಲವು ಭರವಸೆ ನೀಡಿ ಬಳಕೆದಾರರಿಗೆ ವಂಚಿಸುತ್ತಿದೆ.

ಹಾಗಾಗಿ ಗೋಲ್ಡನ್ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲಾಕ್‌ಜಾಕ್, ಅನ್‌ಲಿಮಿಟೆಡ್ ಸ್ಕೋರ್, ಬಿಗ್ ಡಿಸಿಶನ್, ಜೆವೆಲ್ ಸೀ, ಲಕ್ಸ್ ಫ್ರೂಟ್ಸ್ ಗೇಮ್, ಲಕ್ಕಿ ಕ್ಲವರ್, ಕಿಂಗ್ ಬ್ಲಿಡ್ಜ್, ಲಕ್ಕಿ ಸ್ಟೆಪ್ಸ್ ಹಾಗೂ ವಾಕಿಂಗ್ ಜಾಯ್ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದ್ದು, ಈಗಾಗಲೇ ಇವುಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ಡಿಲೀಟ್ ಮಾಡಿದೆ. ಇವುಗಳು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅಪಾಯವನ್ನು ತಂದೊಡ್ಡುತ್ತದೆ ಎಂದು ಗೂಗಲ್ ತಿಳಿಸಿದೆ‌.

ಬಳಕೆದಾರರು ಫಿಟ್ನೆಸ್ ಬಗೆಗಿನ ಮಾಹಿತಿಗಾಗಿ ಇಂತಹ ಆ್ಯಪ್‌ಗಳನ್ನು ಬಳಸುತ್ತಾರೆ. ಆದರೆ ಇವುಗಳು ಬಳಕೆದಾರರಿಗೆ ಹಲವು ಸುಳ್ಳು ಭರವಸೆಗಳನ್ನು ನೀಡುತ್ತಿವೆ. ಅಲ್ಲದೆ, ಬಳಕೆದಾರರಿಗೆ ಹಲವು ಚಟುವಟಿಕೆಗಳನ್ನು ನೀಡಿ ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ವಂಚಿಸುತ್ತಿದೆ. ರಿವಾರ್ಡ್ ಬಳಸುವ ವೇಳೆ ಬಳಕೆದಾರರನ್ನು ಬ್ಲಾಕ್ ಮಾಡುವ ಅಥವಾ ಇತರ ವೆಬ್‌ಸೈಟ್‌ಗೆ ಕರೆದೊಯ್ಯುವ ಆ್ಯಪ್‌ಗಳು ಬಳಕೆದಾರರಿಗೆ ಅಪಾಯ ಉಂಟುಮಾಡುತ್ತವೆ ಎಂದು ಗೂಗಲ್ ತಿಳಿಸಿದ್ದು, ಎಚ್ಚರಿಕೆ ನೀಡಿದೆ. ಈ ಕಾರಣದಿಂದ ಈಗಾಗಲೇ ಈ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಂಡಿರುವ ಬಳಕೆದಾರರು ಕೂಡಲೇ ಇವುಗಳನ್ನು ಡಿಲೀಟ್ ಮಾಡಬೇಕು ಎಂದು ಗೂಗಲ್ ಸೂಚನೆ ನೀಡಿದೆ.

ಈ ಆ್ಯಪ್ ಗಳಲ್ಲೇ ಕೆಲವೊಂದು ಆ್ಯಪ್‌ಗಳು ಬಳಕೆದಾರರನ್ನು ಇತರ ವೆಬ್‌ಸೈಟ್, ಇತರ ಮಾಲ್‌ವೇರ್ ಡೌನ್ಲೋಡ್ ಮಾಡಿಸುತ್ತಿದೆ. ಹೀಗೆ ಮಾಡಿ ವಂಚಕ ಆ್ಯಪ್‌ಗಳು ಬಳಕೆದಾರರ ಫೋನ್ ಮೂಲಕ ಅವರ ವೈಯುಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತವೆ. ಈ ಕಾರಣದಿಂದ ಈಗಾಗಲೇ ನಿಷೇಧವಾದ ಆ್ಯಪ್‌ಗಳನ್ನು ಬಳಸಬೇಡಿ, ಅದನ್ನು ಡಿಲೀಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ಸೂಚನೆ ನೀಡಿದೆ.