Home latest ಉಪಯುಕ್ತ ಮಾಹಿತಿ : ಗೂಗಲ್ ಪೇ ನಲ್ಲಿ ಮತ್ತೆ ‘ ಬದಲಾವಣೆ’ : ಹಣದ ವಹಿವಾಟಿಗೆ...

ಉಪಯುಕ್ತ ಮಾಹಿತಿ : ಗೂಗಲ್ ಪೇ ನಲ್ಲಿ ಮತ್ತೆ ‘ ಬದಲಾವಣೆ’ : ಹಣದ ವಹಿವಾಟಿಗೆ ಹೊಸ ಮಿತಿಗಳು !

Hindu neighbor gifts plot of land

Hindu neighbour gifts land to Muslim journalist

ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಂತಹ ಯುಪಿಐ ಆಧಾರಿತ ಪಾವತಿ ಸೇವಾ ಪೇಮೆಂಟ್ ‘ ಗೂಗಲ್ ಪೇ’ ಕೆಲವೊಂದು ಮುಖ್ಯವಾದ ಬದಲಾವಣೆಗಳನ್ನು ಮಾಡಿದೆ.

ಗರಿಷ್ಠ ಮೊತ್ತದ ಮಿತಿ,ಹಾಗೂ ಒಂದೇ ದಿನದಡಿ ಎಷ್ಟು ವಹಿವಾಟು ಮಾಡಬಹುದು ಎಂಬುದನ್ನು ನಿಗದಿಪಡಿಸಿದೆ.

NEFT ಮತ್ತು IMPS ನಂತಹ ಬ್ಯಾಂಕ್ ವರ್ಗಾವಣೆ ವಿಧಾನಗಳಂತೆಯೇ, ಇದೀಗ ಗೂಗಲ್ ಪೇ ಆಪ್ ನಲ್ಲಿ ಕೂಡಾ ಕೆಲವು ಯುಪಿಐ ಮಿತಿಗಳನ್ನು ತರಲಾಗಿದೆ.

  1. ಗೂಗಲ್ ಪೇ ಬಳಕೆದಾರರು ನೀವು 2022 ರಲ್ಲಿ ಒಂದೇ ದಿನದಲ್ಲಿ 1 ಲಕ್ಷ ರೂ.ಹಣವನ್ನು ಮಾತ್ರ ಕಳುಹಿಸಬಹುದಾದ ಮಿತಿಯನ್ನು ನಿಗದಿಪಡಿಸಿದೆ.
  2. ಗೂಗಲ್ ಪೇ ಬಳಕೆದಾರರಿಗೆ ಒಂದೇ ದಿನದಲ್ಲಿ ಗರಿಷ್ಠ 10 ವಹಿವಾಟುಗಳನ್ನು ಮಾಡಲು ಅನುಮತಿ ನೀಡಿದೆ.

ಇನ್ನು ಮುಂದೆ ಗೂಗಲ್ ಪೇ ಬಳಕೆದಾರರು ಒಂದು ದಿನದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಾವತಿಸಲು ಹಾಗೂ ಪಡೆಯಲು ಸಾಧ್ಯವಿಲ್ಲ. ಹಾಗೆಯೇ 10 ಯುಪಿಐ ಪಾವತಿಗಳನ್ನು ನಡೆಸಿದ ನಂತರ ಆಪ್ ನಲ್ಲಿ ಪಾವತಿಗಳನ್ನು ನಡೆಸಲು ಸಾಧ್ಯವಾಗದಂತೆ ನಿರ್ಬಂಧಿಸಲಾಗುತ್ತದೆ.

ಇನ್ನು ಹಣಕ್ಕಾಗಿ ವಿನಂತಿಸಲು ಬಂದಾಗ, ಬಳಕೆದಾರರು ಒಂದು ದಿನದಲ್ಲಿ 2000 ರೂ.ಗಿಂತ ಹೆಚ್ಚಿನ ಹಣ ವಿನಂತಿಸಲು ಸಾಧ್ಯವಿಲ್ಲ.

ಇವಿಷ್ಟು ಮಾತ್ರವಲ್ಲದೇ, ಗೂಗಲ್ ಪೇ ಹಣ ವರ್ಗಾವಣೆ ಮಿತಿಗಳ ಹೊರತಾಗಿ, ಬ್ಯಾಂಕ್ ನಿರ್ಬಂಧಗಳು ಕೂಡ ಗೂಗಲೇ ಪೇನಲ್ಲಿ ಇದೆ.

ಅವು ಯಾವುದೆಂದರೆ, ಯುಪಿಐ ವಹಿವಾಟಿನ ದೈನಂದಿನ ವಹಿವಾಟಿನ ಮಿತಿಯು ವಿಭಿನ್ನವಾಗಿದ್ದು, 5000 ರೂ.ಗಳಿಂದ 1,00,000 ರೂ.ಗಳವರೆಗೆ ಹಣದ ವ್ಯವಹಾರವನ್ನು ನಡೆಸಲು ಅನುಮತಿ ನೀಡುತ್ತದೆ. ಇದರಲ್ಲಿ ಗೂಗಲ್ ಪೇ ಬಳಕೆದಾರರ ಬ್ಯಾಂಕ್ ಯಾವುದು ಎಂಬುವುದರ ಮೇಲೆ ಆಧಾರಿತವಾಗಿದೆ.

ಗೂಗಲ್ ಪೇ ನಲ್ಲಿ ಯುಪಿಐ ವಹಿವಾಟು ಮಿತಿಯನ್ನು ಹೆಚ್ಚಿಸಲು ಯಾವುದೇ ವಿಧಾನವಿಲ್ಲ. ಆದರೂ, ಗೂಗಲ್ ಪೇ ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ನೆಫ್ಟ್ ನಂತಹ ಇತರ ವರ್ಗಾವಣೆ ವಿಧಾನಗಳನ್ನು ಅನುಸರಿಸಬಹುದು.