Home News HSRP Number Plate: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- HSRP ನಂಬರ್ ಪ್ಲೇಟ್ ಅಳವಡಿಕೆಗೆ...

HSRP Number Plate: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ !

HSRP Number Plate

Hindu neighbor gifts plot of land

Hindu neighbour gifts land to Muslim journalist

HSRP Number Plate: ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಗಳ(HSRP Number Plate)ಅಳವಡಿಕೆಗೆ ಸರ್ಕಾರವು ಮುಂದಿನ ವರ್ಷ ಫೆಬ್ರವರಿ 17ರವರೆಗೆ ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ‘ಅವಧಿ ವಿಸ್ತರಣೆ’ ಮಾಡಿ ಆದೇಶ ಹೊರಡಿಸಿದೆ.

2019ರ ಏಪ್ರಿಲ್ ತಿಂಗಳಿಗಿಂತಲೂ ಮೊದಲು ನೋಂದಾಯಿಸಲಾಗಿರುವ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಗಳ(HSRP Number Plate)ಅಳವಡಿಕೆಗೆ ನೀಡಿದ್ದ ಗಡುವು ನವೆಂಬರ್ 17ರಂದು ಮುಗಿಯಲಿದೆ ಎಂದ ಇಲಾಖೆಯು ತಿಳಿಸಿತ್ತು. ಆದರೀಗ ಸರ್ಕಾರ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು HSRP ನಂಬರ್ ಪ್ಲೇಟ್ ಅಳವಡಿಸಲು ಮುಂದಿನ ವರ್ಷ ಫೆಬ್ರವರಿ 17ರವರೆಗೂ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ಅಂದಹಾಗೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಮಾಲಿಂಗರೆಡ್ಡಿಯವರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆಗೆ ಅವಧಿ ವಿಸ್ತರಿಸುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವಂತ ಗಡುವನ್ನು ನವೆಂಬರ್.17ರಿಂದ ಫೆಬ್ರಬರಿ.17, 2024ರವರೆಗೆ ವಿಸ್ತರಣೆ ಮಾಡೋದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಏನಿದು ಎಚ್‌ಎಸ್‌ಆರ್‌ಪಿ, ಯಾಕೆ ಬೇಕು?
ಎಚ್‌ಎಸ್‌ ನಂಬರ್‌ ಪ್ಲೇಟ್‌ನಲ್ಲಿ ವಾಹನದ ಎಂಜಿನ್‌ ಸಂಖ್ಯೆ, ಚಸ್ಸಿ ಸಂಖ್ಯೆ ಸೇರಿ ಹಲವು ಮಾಹಿತಿ ಅಡಕ ಮಾಡಲಾಗಿರುತ್ತದೆ. ಈ ಎಲ್ಲ ಮಾಹಿತಿಗಳು ಕೇಂದ್ರ ಸರಕಾರ ಡೇಟಾ ಬೇಸ್‌ನಲ್ಲಿ ಸಂಗ್ರಹವಾಗುತ್ತವೆ. ವಾಹನ ಕಳ್ಳತನವಾದರೆ ಈ ಮಾಹಿತಿ ಬಳಸಿಕೊಂಡು ಬೇಗ ವಾಹನ ಹುಡುಕಬಹುದು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ ಈ ನಂಬರ್‌ ಪ್ಲೇಟ್‌ ಬದಲಾವಣೆ ಅಥವಾ ಮಾರ್ಫಿಂಗ್‌ ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಸುರಕ್ಷಿತವಾಗಿ ಅಳವಡಿಕೆ ಮಾಡುವುದರಿಂದ ಕಳ್ಳರ ಕೈಗೆ ಸಿಕ್ಕರೆ ಕೂಡಲೇ ತೆಗೆಯೋದಕ್ಕೂ ಸಾಧ್ಯವಿಲ್ಲ. ಇನ್ನು ನಂಬರ್‌ ಪ್ಲೇಟ್‌ನಲ್ಲಿರುವ ಮಾಹಿತಿ ತಿದ್ದುವುದಕ್ಕೆ ಸಾಧ್ಯವಿಲ್ಲ.

 

ಇದನ್ನು ಓದಿ: Uses For An Old ToothBrush: ಹಳೆಯ ಟೂತ್ ಬ್ರೆಷ್ ಬಿಸಾಡ್ತೀರಾ ?! ಇನ್ಮುಂದೆ ಎಸೆಯದೆ ಹೀಗೆಲ್ಲಾ ಉಪಯೋಗಿಸಿ