Home News Train tickets: ಮುಂಗಡವಾಗಿ ರೈಲ್ವೇ ಟಿಕೆಟ್ ಬುಕಿಂಗ್​ ಮಾಡುವವರಿಗೆ ಗುಡ್ ನ್ಯೂಸ್!

Train tickets: ಮುಂಗಡವಾಗಿ ರೈಲ್ವೇ ಟಿಕೆಟ್ ಬುಕಿಂಗ್​ ಮಾಡುವವರಿಗೆ ಗುಡ್ ನ್ಯೂಸ್!

Mangaluru Bengaluru Trains

Hindu neighbor gifts plot of land

Hindu neighbour gifts land to Muslim journalist

Train tickets: ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಮುಖ್ಯವಾಗಿ ರೈಲು ಪ್ರಯಾಣ ಸುಲಭ ಮತ್ತು ಅಗ್ಗವಾಗಿದೆ ಹೌದು, ಆದ್ರೆ ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಎದುರಾಗುವ ಕೆಲ ಸಮಸ್ಯೆಗಳು ಪ್ರಯಾಣಿಕರನ್ನು ಹೆಚ್ಚಾಗಿ ನಿರಾಶೆ ಮಾಡುತ್ತವೆ. ಆದ್ರೆ ಇನ್ನುಮುಂದೆ 120 ದಿನಗಳ ಬದಲು 60 ದಿನಗಳ ಮೊದಲು ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಬಹುದು. ನವೆಂಬರ್ 1ರಿಂದ ರೈಲು ಟಿಕೆಟ್​ (Train tickets) ಬುಕಿಂಗ್​​ಗೆ ಈ ಹೊಸ ನಿಯಮ ಅನ್ವಯವಾಗಲಿದೆ. IRCTC ಬುಕಿಂಗ್ ಪ್ರಕಾರ, ರೈಲ್ವೆ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ ಎಂದು ಘೋಷಿಸಿದೆ.

ಇದರ ಜೊತೆಗೆ ಟಿಕೆಟ್ ರಹಿತ ಪ್ರಯಾಣಕ್ಕೆ ರೈಲ್ವೆ ಇಲಾಖೆ ಕಡಿವಾಣ ಹಾಕಿದೆ. ರೈಲ್ವೆ ಸಚಿವಾಲಯವು 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದು ಅಕ್ಟೋಬರ್ 1-15 ಮತ್ತು ಅಕ್ಟೋಬರ್ 25- ನವೆಂಬರ್ 10ರ ನಡುವೆ ವಿಶೇಷ ಡ್ರೈವ್‌ನ ಪ್ರಾರಂಭವನ್ನು ನಿರ್ದೇಶಿಸುತ್ತದೆ. 1989ರ ರೈಲ್ವೇ ಕಾಯಿದೆಯ ಪ್ರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.