Home News Good News for Teachers: ಶಿಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್‌: ಮುಂಬಡ್ತಿ ನೀಡಲು ಮಹತ್ವದ ಚರ್ಚೆ

Good News for Teachers: ಶಿಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್‌: ಮುಂಬಡ್ತಿ ನೀಡಲು ಮಹತ್ವದ ಚರ್ಚೆ

Hindu neighbor gifts plot of land

Hindu neighbour gifts land to Muslim journalist

Good News for Teachers: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೀಘ್ರದಲ್ಲಿ ಮುಂಬಡ್ತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

2017 ರ ಮೊದಲು ಪ್ರಾಥಮಿಕ ಶಾಲೆ ಶಿಕ್ಷಕರಾಗಿ ನೇಮಕಗೊಂಡವರಿಗೆ ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಬೋಧನೆಗೆ ಸೀಮಿತಗೊಳಿಸಿ ಹಿಂಬಡ್ತಿಯಿಂದಾಗಿರುವ ಅನ್ಯಾಯ ಸರಿಪಡಿಸುವ ಕುರಿತು ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಬೆಯಲ್ಲಿ ಚರ್ಚೆ ಮಾಡಲಾಗಿದೆ. ಆದರೆ ಇದರ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಇದನ್ನೂ ಓದಿ:Social Media Apps: ಭಾರತದ ಈ ನೆರೆಯ ದೇಶದಲ್ಲಿ ರಾತ್ರೋರಾತ್ರಿ FACEBOOK, YOUTUBE ಮತ್ತು X ಸೇರಿದಂತೆ 26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಸ್ಥಗಿತ

ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಏಳನೇ ತರಗತಿಯವರೆಗೆ ಬೋಧನೆಗೆ ಅವಕಾಶ ನೀಡಿ ಒಂದು ವೇತನ ಬೇಡಿಕೆ ಎಂಟು ವರ್ಷಗಳಿಂದಲೂ ಇದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೆಲವು ಕಾನೂನು ಅಂಶಗಳ ವಿಚಾರದಿಂದ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೇಳಲಾಗಿದೆ.

 

ಕಾನೂನು ಇಲಾಖೆ ಅಭಿಪ್ರಾಯ ಪಡೆದುಕೊಂಡು ಮುಂದಿನ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಕುರಿತು ಸಾಧ್ಯತೆ ಇದೆ ಎಂದು ಹೇಳಲಾಗಿದೆ.