Home News Saudi Arabia: ಸೌದಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಆ ಎಣ್ಣೆ ಜೊತೆ ಈ ಎಣ್ಣೆ – 73...

Saudi Arabia: ಸೌದಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಆ ಎಣ್ಣೆ ಜೊತೆ ಈ ಎಣ್ಣೆ – 73 ವರ್ಷಗಳ ನಂತರ ಸೌದಿಯಲ್ಲಿ ಮದ್ಯ ಮಾರಾಟ – ಕಾನೂನು ಹೇಗಿರಬಹುದು?

Hindu neighbor gifts plot of land

Hindu neighbour gifts land to Muslim journalist

Saudi Arabia: ಗಲ್ಫ್‌ ರಾಷ್ಟಗಳಲ್ಲಿ ನೀರಿಗೆ ಬರ ಅನ್ನೋದು ಗೊತ್ತೇ ಇದೆ. ಅಲ್ಲಿ ಬಾವಿ ತೋಡಿದರೆ ಸಿಗೋದು ಕಚ್ಚಾ ತೈಲ. ಮುಸ್ಲೀಂ ರಾಷ್ಟ್ರಗಳಲ್ಲಿ ಆ ಎಣ್ಣೆ ಎನೋ ಸಿಗುತ್ತದೆ. ಆದರೆ ಈ ಎಣ್ಣೆ ಸಿಗದೆ ಅದೆಷ್ಟೋ ಪ್ರವಾಸಿಗರ ಪ್ರವಾಸ ಸಂಪೂರ್ಣವಾಗದೆ ಕಿಕ್‌ ಸಿಗುತ್ತಿರಲಿಲ್ಲ. ಭಾರತದಿಂದ(India) ಶ್ರೀಮಂತ ತೈಲ(Oil) ಸಂಪತ್ಭರಿತ ಗಲ್ಫ್ ರಾಷ್ಟ್ರಗಳಿಗೆ ದೀರ್ಘ ಸಮಯ ವಾಸ್ತವ್ಯಕ್ಕೆ ಹೋಗುವ ಉದ್ಯೋಗಸ್ಥರಿಗೆ ಮತ್ತು ಪ್ರವಾಸಿ ವರ್ಗಕ್ಕೆ ಇದೀಗ ಒಳ್ಳೆಯ ಸುದ್ದಿ. ದುಡಿಯುವವರ ದುಡ್ಡಿನ ಜೊತೆ ಇನ್ನು ಮುಂದೆ ಮದ್ಯ ಕೂಡ ಸೇರಿಕೊಳ್ಳಲಿದೆ. ಸೌದಿ ಲೈಫು ಮತ್ತೊಂದಷ್ಟು ಕಲರ್ ಫುಲ್ ಆಗೋದoತೂ ಸತ್ಯ.

1952 ನಂತರ ಮೊತ್ತ ಮೊದಲ ಬಾರಿಗೆ ಸೌದಿ ಅರೇಬಿಯಾ ತನ್ನ 73 ವರ್ಷಗಳ ಹಿಂದಿನ ಮದ್ಯ ನಿಷೇಧ ಕ್ರಮವನ್ನು ತೆಗೆದು ಹಾಕಿದೆ. 2026ರಿಂದ ನಿಯಂತ್ರಿತ ಮದ್ಯ ಸೇವನೆಗೆ ಅನುಮತಿ ನೀಡಲಿದ್ದು, ಇದು ಮುಂದೆ ಬರುವ ಎಕ್ಸ್ ಪೋ 2030 ಹಾಗೂ FIFA ವಿಶ್ವಕಪ್ 2034 ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪೂರ್ವತಯಾರಿ ಆಗಿದೆ ಎನ್ನಲಾಗಿದೆ.

ಈ ಮದ್ಯ ಮಾರಾಟವು ಕೆಲವು ಪ್ರದೇಶಗಳಿಗೆ ಮಾತ್ರವೇ ಸೀಮಿತವಾಗಿದ್ದು, ಸೌದಿಯ 600 ಪ್ರದೇಶಗಳನ್ನು ಇದು ಒಳಗೊಂಡಿದ್ದು, ಇಲ್ಲಿ ಐಷಾರಾಮಿ ಹೋಟೆಲ್, ರೆಸಾರ್ಟ್ ಸೇರಿದಂತೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮದ್ಯ ಸರಬರಾಜು ಇರುತ್ತದೆ. ಹಾಗೂ ಕೇವಲ ಬಿಯಲ್, ವೈನ್ ಹಾಗೂ ಸ್ಪೈಡರ್ ಪಾನೀಯಗಳಿಗೆ ಮಾತ್ರವೇ ಅನುಮತಿ ನೀಡಿದ್ದು, ಮನೆಗಳು, ಅಂಗಡಿಗಳು, ಸಾರ್ವಜನಿಕ ಕ್ಷೇತ್ರಗಳಲ್ಲಿ ಅವುಗಳ ಬಳಕೆ ಅನುಮತಿಸುವುದಿಲ್ಲ ಎಂದು ಅದು ಹೇಳಿದೆ.

ಸ್ಥಳೀಯ ಮುಸ್ಲಿಮರಲ್ಲದ, ವಿದೇಶದ ರಾಜತಾಂತ್ರಿಕ ಮತ್ತು ಇತರ ಆಯ್ದ ಜನರಿಗೆ ಮಾತ್ರ ಮದ್ಯ ದೊರೆಯಲಿದೆ. ಸ್ಟ್ರಾಂಗ್ ಅಲ್ಲದ ಪಾನೀಯಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ ಸೌದಿ ಸರ್ಕಾರ. ಬೀರು, ವೈನು ಮತ್ತು ಲೈಟ್ ಆಗಿರುವ ಪಾನೀಯಗಳು ಆಯ್ದ ಸ್ಥಳಗಳಲ್ಲಿ ಮಾತ್ರ ದೊರೆಯಲಿದೆ.
ಪರವಾನಗಿ ಪಡೆದ ಸ್ಥಳಗಳಲ್ಲಿ ಮತ್ತು ತರಬೇತಿ ಇರುವವರು ಮಾತ್ರವೇ ಮದ್ಯ ಮಾರಾಟವನ್ನು ಮಾಡಬೇಕು. ಇಲ್ಲಿಯೂ ಉಂಟಾಗುವ ದುರುಪಯೋಗವನ್ನು ತಡೆಗಟ್ಟುವುದು ಅಧಿಕಾರಿಗಳ ಮೂಲ ಗುರಿಯಾಗಿದ್ದು, ದೇಶದ ಪದ್ಧತಿಗಳಿಗೆ ಹೊಂದಿಕೆಯಾಗುವಂತೆ ನಿಯಮಗಳನ್ನು ವಿನ್ಯಾಸ ಮಾಡಲಾಗಿದೆ. ಸೌದಿಯ ಸಂಪ್ರದಾಯಗಳಿಗೆ ತೊಡಕು ಕೆಡುಕು ಆಗದಂತೆ ನಿಯಂತ್ರಿತ ಮದ್ಯ ಸೇವನೆ ಇರಲಿದೆ ಎನ್ನಲಾಗಿದ್ದು ಅತ್ಯಂತ ಬಿಗಿ ಆಡಳಿತ ವ್ಯವಸ್ಥೆಯ ಒಳಗೆ ಮದ್ಯ ಸರಬರಾಜು ಆಗಲಿದೆ.