Home News Farmers: ರೈತರಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ಇಂದಿನಿಂದ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ ಖರೀದಿ ಪ್ರಾರಂಭ

Farmers: ರೈತರಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ಇಂದಿನಿಂದ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ ಖರೀದಿ ಪ್ರಾರಂಭ

Good News To Farmers

Hindu neighbor gifts plot of land

Hindu neighbour gifts land to Muslim journalist

Good News for Farmers: ಅಕ್ಟೋಬರ್‌ 28 ರಿಂದ ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ ಖರೀದಿ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

ಈಗಾಗಲೇ ಎಲ್ಲಾ ಕಡೆ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, 206 ಖರೀದಿ ಕೇಂದ್ರಗಳಲ್ಲಿ ಸೋಯಾಬೀನ್‌ ಖರೀದಿಸಲಾಗುವುದು. 19,325 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರ ತೆರೆದಿದ್ದು, 13000 ರೈತರು ನೋಂದಾಯಿಸಿದ್ದಾರೆ.

ಹೆಸರು ಕಾಳು ಖರೀದಿಗೆ 211 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. 16,578 ರೈತರು ನೋಂದಾಯಿಸಿದ್ದಾರೆ. ಧಾರವಾಡದಲ್ಲಿ 6362 ರೈತರು ನೋಂದಣಿ ಮಾಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 120 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5341 ರೈತರು ನೋಂದಾಯಿಸಿಕೊಂಡಿದ್ದಾರೆ. ಉದ್ದಿನಕಾಳು ಖರೀದಿಗೆ 134 ಖರೀದಿ ಕೇಂದ್ರ ತೆರೆಯಲಾಗಿದ್ದು, 5274 ರೈತರು ನೋಂದಾಯಿಸಿಕೊಂಡಿದ್ದಾರೆ.