Home Latest Health Updates Kannada ಬೆಳಗ್ಗೆ ಈ ವಸ್ತುಗಳು ಕಾಣಿಸಿದರೆ ಶುಭವೋ ಶುಭ | ಅದೃಷ್ಟ ನಿಮ್ಮ ಮಡಿಲಿಗೆ

ಬೆಳಗ್ಗೆ ಈ ವಸ್ತುಗಳು ಕಾಣಿಸಿದರೆ ಶುಭವೋ ಶುಭ | ಅದೃಷ್ಟ ನಿಮ್ಮ ಮಡಿಲಿಗೆ

Hindu neighbor gifts plot of land

Hindu neighbour gifts land to Muslim journalist

ನಮ್ಮ ಯಾವುದೇ ಕೆಲಸಗಳನ್ನು ಶುಭ ಅಥವಾ ಶ್ರೇಯಸ್ಸು ಕೂಡಿದ ಘಳಿಗೆಯಿಂದ ಆರಂಭಿಸುತ್ತೇವೆ. ಹೌದು ಪ್ರಾಚೀನ ಕಾಲದಿಂದಲೂ ನಾವು ನಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡನ್ನು ಅನುಕರಣೆ ಮಾಡುತ್ತ ಬಂದಿದ್ದೇವೆ. ಹಾಗೆಯೇ ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳಗಿನ ಸಮಯ ನಮ್ಮ ಕಣ್ಣುಗಳ ಮೂಲಕ ಕೆಲವು ವಸ್ತು ಅಥವಾ ದೃಶ್ಯ ನೋಡಿದರೆ ಒಳಿತು ಎಂಬ ನಂಬಿಕೆ ಮತ್ತು ಭರವಸೆ ಇದೆ.

ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ.
ಹಾಗೆಯೇ ನಾವು ಮುಂಜಾನೆ ವೇಳೆ ನಾವು ನೋಡಬಲ್ಲ ದೃಶ್ಯಗಳು :

  • ಹಾಲು ತುಂಬಿದ ಪಾತ್ರೆ : ನೀವು ಬೆಳಗ್ಗೆ ಮನೆಯಿಂದ ಹೊರಡುವ ತಕ್ಷಣ ಹಾಲು ತುಂಬಿದ ಪಾತ್ರೆಯನ್ನು ನೋಡಿದರೆ, ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸ್ಪಷ್ಟವಾಗಿ ಲಕ್ಷ್ಮಿದೇವಿಯ ಕೃಪೆಯ ಸಂಕೇತವಾಗಿದೆ. ಈ ರೀತಿ ಇರುವುದರಿಂದ ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಪಡೆಯುವ ಸಾಧ್ಯತೆಯಿದೆ. ಇದು ನಿಮ್ಮ ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ತರುತ್ತದೆ.
  • ತೆಂಗಿನಕಾಯಿ: ತೆಂಗಿನಕಾಯಿಯನ್ನು ಪೂಜೆಗಳಲ್ಲಿ ಬಳಸುತ್ತೇವೆ. ತೆಂಗಿನಕಾಯಿ ಬಗೆಗೆಗಿನ ಅಪಾರ ಇತಿಹಾಸ ಇದೆ. ಆದ್ದರಿಂದ ತೆಂಗಿನಕಾಯಿ ನೋಡುವುದು ತುಂಬಾ ಮಂಗಳಕರ.
  • ಶಂಖ : ಬೆಳಗ್ಗೆ ಶಂಖವನ್ನು ನೋಡುವುದು ತುಂಬಾ ಮಂಗಳಕರ. ಶಂಖವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ, ವಿಷ್ಣುವು ಯಾವಾಗಲೂ ಶಂಖವನ್ನು ಧರಿಸುತ್ತಾನೆ. ಅದೇ ರೀತಿ ತಾಯಿ ಲಕ್ಷ್ಮಿದೇವಿಯೂ ಶಂಖವನ್ನು ತುಂಬಾ ಪ್ರೀತಿಸುತ್ತಾಳೆ. ಬೆಳಗ್ಗೆ ಶಂಖವನ್ನು ನೋಡಿದರೆ, ವಿಷ್ಣು ಮತ್ತು ಲಕ್ಷ್ಮಿದೇವಿಯ ಅನುಗ್ರಹದಿಂದ ಅದೃಷ್ಟವು ತೆರೆದುಕೊಳ್ಳುತ್ತದೆ. ಅಪಾರ ಯಶಸ್ಸು, ಸಂಪತ್ತು ಮತ್ತು ಸಂತೋಷವನ್ನು ಪಡೆಯುವ ಸಾಧ್ಯತೆಗಳಿವೆ.
  • ಮದುವೆಯಾದ ಮಹಿಳೆ: ಮದುವೆಯಾದ ಮಹಿಳೆಯನ್ನು ಸೌಭಾಗ್ಯ ವತಿಯಾಗಿ ಪೂಜೆಯ ತಟ್ಟೆಯೊಂದಿಗೆ ದೇವಸ್ಥಾನಕ್ಕೆ ಬಂದು ಹೋಗುವುದನ್ನು ನೋಡುವುದು ತುಂಬಾ ಶ್ರೇಯಸ್ಕರ. ನೀವು ಶೀಘ್ರದಲ್ಲೇ ದೊಡ್ಡ ಲಾಭವನ್ನು ಪಡೆಯಲಿದ್ದೀರಿ ಎಂಬುದನ್ನು ಇದು ಹೇಳುತ್ತದೆ.
  • ಹಕ್ಕಿಗಳ ಚಿಲಿಪಿಲಿ ಸದ್ದು: ಬೆಳಗ್ಗೆ ಕಣ್ಣು ತೆರೆದ ತಕ್ಷಣ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿದರೆ ಅದು ತುಂಬಾ ಶುಭ ಸೂಚನೆ. ನೀವೂ ಸಹ ಹಕ್ಕಿಳ ಚಿಲಿಪಿಲಿ ಸದ್ದು ಕೇಳಿದರೆ ಇಡೀ ದಿನವು ಉತ್ತಮವಾಗಿ ನಡೆಯುವುದಲ್ಲದೆ, ಕೆಲಸದಲ್ಲಿ ಯಶಸ್ಸು ಇರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.
  • ಕಸ ಗುಡಿಸುವುದನ್ನು ನೋಡಿದರೆ: ಮುಂಜಾನೆ ಮನೆಯಿಂದ ಹೊರ ಬಂದ ಕೂಡಲೇ ಯಾರಾದರೂ ನೆಲ ಗುಡಿಸುತ್ತಿರುವುದನ್ನು ಕಂಡರೆ ಬೇಗ ಹಣ ಸಿಗುತ್ತದೆ ಎಂದು ಸೂಚಿಸುತ್ತದೆ. ಇದು ಲಕ್ಷ್ಮಿದೇವಿಯ ಆಶೀರ್ವಾದದ ಸಂಕೇತವಾಗಿದೆ. ಮಹಿಳೆ ಕಸ ಗುಡಿಸುವದನ್ನು ನೀವು ನೋಡಿದರೆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಹೀಗೆ ನೀವು ಮುಂಜಾನೆ ಮನೆಯಿಂದ ಹೊರ ನಡೆಯುವಾಗ ಈ ಎಲ್ಲಾ ದೃಶ್ಯ ನೋಡಿದರೆ ಶುಭ ವಿಚಾರ ಅಥವಾ ಶ್ರೇಯಸ್ಸಿನ ಸಂಕೇತ ಎಂದು ಶಾಸ್ತ್ರ ಪ್ರಕಾರ ಸಲಹೆ ನೀಡಲಾಗಿದೆ.