Home News Udupi: ಕರಾವಳಿಯಲ್ಲಿ ‘ಗೋಲ್ಡನ್ ಹುಡುಗಿ’ಯರ ಆರ್ಭಟ – 170 ಗಂಟೆ ನಿರಂತರ ಭರತನಾಟ್ಯ ಮಾಡಿ...

Udupi: ಕರಾವಳಿಯಲ್ಲಿ ‘ಗೋಲ್ಡನ್ ಹುಡುಗಿ’ಯರ ಆರ್ಭಟ – 170 ಗಂಟೆ ನಿರಂತರ ಭರತನಾಟ್ಯ ಮಾಡಿ ರೆಮೋನಾ ದಾಖಲೆ ಮುರಿದ ದೀಕ್ಷಾ !!

Hindu neighbor gifts plot of land

Hindu neighbour gifts land to Muslim journalist

Udupi: ಕರಾವಳಿಯಲ್ಲಿ ಇದೀಗ ಗಣೇಶ ಚತುರ್ಥಿಯ ನಡುವೆ ‘ಗೋಲ್ಡನ್ ಹುಡುಗಿಯರ’ ಸದ್ದು ಜೋರಾಗಿದೆ. ಇತ್ತೀಚಿಗಷ್ಟೇ ಮಂಗಳೂರಿನಲ್ಲಿ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ್ದ ರೆಮೊನಾ ಅವರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದರು. ಇದೀಗ ಈ ಬೆನ್ನಲ್ಲೇ ಈ ರೆಕಾರ್ಡ್ ಅನ್ನು ಮುರಿಯಲು ಉಡುಪಿಯ ದೀಕ್ಷಾ ವಿ ಅವರು ಮುಂದಾಗಿದ್ದಾರೆ.

ಹೌದು, ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ಗಾಗಿ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ದೀಕ್ಷಾ ವಿ. ಅವರು ಆ. 21 ರಿಂದ ಆರಂಭಿಸಿರುವ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡಲು ಮುಂದಾಗಿದ್ದಾರೆ. ಇದೀಗ ಅವರ ಪ್ರದರ್ಶನವು ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳನ್ನು ದಾಟಿತು. ಈ ಮೂಲಕ ಅವರು ಮಂಗಳೂರಿನ ರೆಮೊನಾ ಇವೆಟ್‌ ಪಿರೇರಾ ಅವರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಈ ದಾಖಲೆಗೆ ಸಾಕ್ಷಿಯಾಗಿದ್ದ ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್‌ ವಿಷ್ಣೋಯಿ ಮತನಾಡಿ, ಸಣ್ಣ ಹಳ್ಳಿಯೊಂದರ ಸಾಮಾನ್ಯ ಕುಟುಂಬದ ಹುಡುಗಿ ದೀಕ್ಷಾ ಅವರು ದೊಡ್ಡ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ್ದ ರೆಮೊನಾ ಅವರ ದಾಖಲೆಯನ್ನು ದೀಕ್ಷಾ ಅವರು ಮುರಿದಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳುತ್ತೇನೆ. ದೀಕ್ಷಾ ಅವರು 216 ಗಂಟೆಗಳ ಗುರಿ ಹೊಂದಿದ್ದು, ನೃತ್ಯ ಮುಂದುವರಿಸಿದ್ದಾರೆ. ಎಷ್ಟು ಗಂಟೆಗಳ ವರೆಗೆ ಅವರು ನೃತ್ಯ ಮುಂದುವರಿಸುತ್ತಾರೆ ಎಂಬುದನ್ನು ಕಾದು ನೋಡುವ ಎಂದು ಹೇಳಿದರು.

ಇನ್ನು ಉಡುಪಿಯ ಡಾ. ಜಿ. ಶಂಕರ್‌ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ದೀಕ್ಷಾ ಅವರು 170 ಗಂಟೆಗಳ ಭರತನಾಟ್ಯ ಪ್ರದರ್ಶನ ಪೂರೈಸಿದಾಗ ನೆರೆದಿದ್ದವರು ಹೂಮಳೆ ಸುರಿಸುವ ಮೂಲಕ ಅವರನ್ನು ಅಭಿನಂದಿಸಿದರು.

Bill Gates: ಹೊಸದಾಗಿ ಕೆಲಸಕ್ಕೆ ಸೇರುವವರು ಸಂಬಳ ಎಷ್ಟು ಕೇಳಬೇಕು? ಸಲಹೆ ಕೊಟ್ಟ ಬಿಲ್ ಗೇಟ್ಸ್