Home News Gold Price : ಇಳಿಕೆ ಕಂಡ ಚಿನ್ನದ ದರ- ಹೊಸ ವರ್ಷಕ್ಕೆ ಬಂಗಾರ ಖರೀದಿಸುವವರು ನಿರಾಳ

Gold Price : ಇಳಿಕೆ ಕಂಡ ಚಿನ್ನದ ದರ- ಹೊಸ ವರ್ಷಕ್ಕೆ ಬಂಗಾರ ಖರೀದಿಸುವವರು ನಿರಾಳ

Hindu neighbor gifts plot of land

Hindu neighbour gifts land to Muslim journalist

Gold Price : ಸತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ಬಾರಿಗೆ ಚಿನ್ನದ ದರ ಇಳಿಕೆಯಾಗಿದೆ. ಹೀಗಾಗಿ ಹೊಸ ವರ್ಷದ ಹೊಸ್ತಿಲಿನಲ್ಲಿ ಚಿನ್ನದ ದರ ಇಳಿಕೆ ಕಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಬಂಗಾರ ಖರೀದಿಸುವವರು ನಿರಾಳರಾಗಿದ್ದಾರೆ.

 24 ಕ್ಯಾರೆಟ್ ಚಿನ್ನದ ಬೆಲೆ:

24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಅಂದರೆ 1 ಗ್ರಾಂ ಬೆಲೆ ಇಂದು 13,620 ರೂ. ಆಗಿದ್ದು, ನಿನ್ನೆ 13,925 ರೂ. ಇತ್ತು. ನಿನ್ನೆಯೂ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದ್ರೆ ನಿನ್ನೆಗಿಂತಲೂ ಇಂದು ₹305 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,08,960 ರೂ. ಆಗಿದ್ದು, ನಿನ್ನೆ 1,11,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,440 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,36,200 ರೂ. ಆಗಿದ್ದು, ನಿನ್ನೆ 1,39,250 ರೂ. ಇತ್ತು. ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ನಿನ್ನೆಗಿಂತ ಇಂದು ಒಟ್ಟು ₹3,050 ರೂ. ವ್ಯತ್ಯಾಸವಾಗಿದೆ.

 22 ಕ್ಯಾರೆಟ್ ಚಿನ್ನದ ಬೆಲೆ: 

22 ಕ್ಯಾರಟ್‌ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,485 ರೂ. ಆಗಿದ್ದು, ನಿನ್ನೆ 12,765 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹280 ರೂ. ವ್ಯತ್ಯಾಸವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 99,880 ರೂ. ಆಗಿದ್ದು, ನಿನ್ನೆ 1,02,120 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,240 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,24,850 ರೂ. ಆಗಿದ್ದು, ನಿನ್ನೆ 1,27,650 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,800 ರೂ. ಕುಸಿತ ಕಂಡಿದೆ.

ಇಷ್ಟೇ ಅಲ್ಲದೆ ಕಳೆದ ಕೆಲವು ದಿನಗಳಿಂದ ನಾಗಾಲೋಟದಲ್ಲಿದ್ದ ಬೆಳ್ಳಿಯ ಬೆಲೆ ಈಗ ದಿಢೀರನೆ ಕುಸಿದಿದೆ. 100 ಗ್ರಾಂ ಬೆಳ್ಳಿಯ ಬೆಲೆಯ ಮೇಲೆ ಒಮ್ಮೆಗೆ 1,800 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 24,000 ಕ್ಕೆ ತಲುಪಿದೆ. ತಮಿಳುನಾಡು ಮತ್ತು ಕೇರಳದಂತಹ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 25,800 ರ ಆಸುಪಾಸಿನಲ್ಲಿದೆ.