Home News Goat Sold at BMW Price: ಬಕ್ರೀದ್​ ಹಬ್ಬಕ್ಕೆ ಹರಾಜಿನಲ್ಲಿ BMW ಕಾರಿನ ಬೆಲೆಗೆ ಮಾರಾಟವಾಯ್ತು...

Goat Sold at BMW Price: ಬಕ್ರೀದ್​ ಹಬ್ಬಕ್ಕೆ ಹರಾಜಿನಲ್ಲಿ BMW ಕಾರಿನ ಬೆಲೆಗೆ ಮಾರಾಟವಾಯ್ತು ಈ ದುಬಾರಿ ಮೇಕೆ !

Hindu neighbor gifts plot of land

Hindu neighbour gifts land to Muslim journalist

Goat Sold at BMW Price: ಬಕ್ರಿದ್ ಹಬ್ಬದ ಆಚರಣೆಯ ಸಂದರ್ಭ ಮುಸ್ಲಿಮರು ಮನ ಬಿಚ್ಚಿ ಖರ್ಚು ಮಾಡಲು ರೆಡಿಯಾಗಿರುತ್ತಾರೆ. ಈ ಸಂದರ್ಭದಲ್ಲಿ ಅನೇಕ ವಿಶಿಷ್ಟ ಮತ್ತು ಅತ್ಯಂತ ಮೇಕೆಗಳನ್ನು ಮಾರುಕಟ್ಟೆಗೆ ತರಲಾಗುತ್ತದೆ. ಅಂತಹ ವಿಶೇಷವಾದ ಒಂದು ಮೇಕೆಯೊಂದನ್ನು ಇದೀಗ ಹೈದರಾಬಾದ್‌ನಿಂದ ನೇರವಾಗಿ ಮುಂಬೈಗೆ ತರಲಾಗಿದೆ. ಅದರ ವಿಶೇಷತೆ ಮತ್ತು ಬೆಲೆ ಕೇಳಿದ್ರೆ ನೀವು ಕಣ್ಣರಳಿಸೋದು ಗ್ಯಾರಂಟಿ.(Goat Sold at BMW Price) Bakrid festival goat sale.

 

ಹೈದರಾಬಾದಿನಿಂದ ಮುಂಬೈಗೆ ತರಿಸಿಕೊಂಡಿರುವ ಅದರ ವಿಶೇಷತೆ ಎಂದರೆ ಅದರ ಬೆಲೆ. ಹೌದು, ಈ ಒಂದು ಮೇಕೆ ಕೊಳ್ಳೋ ರೇಟಲ್ಲಿ ಒಂದು ಫೀಚರ್ ಲೋಡೆಡ್ ಹೊಚ್ಚಹೊಸ ಬಿ ಎಂ ಡಬ್ಲ್ಯೂ ಕಾರನ್ನು ರೋಡು ಇಳಿಸಬಹುದು. ಅಥವಾ ಜಾಗ್ವಾರ್ ಎಫ್ ಟೈಪಿನ ಬಲಿಷ್ಠ ಫೀಚರ್ ಗಳ ಹೊಸ ಕಾರು ಕೊಂಡುಕೊಳ್ಳಬಹುದು. ಹೌದು ಈ ಮೇಕೆಯ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಈಗಾಗಲೇ ವ್ಯವಹಾರ ಕುದುರಿದ್ದು ಮೇಕೆಯು ಮುಂಬೈ ತಲುಪಿದೆ. ಈ ಮೇಕೆಗೆ ಏಕೀಷ್ಟು ಬೆಲೆ ಎಂದು ನೀವು ಅಚ್ಚರಿಪಡಬಹುದು. ಆದರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದುಡ್ಡು ಮುಖ್ಯವಲ್ಲ, ಧಾರ್ಮಿಕ ನಂಬಿಕೆ ಎನ್ನುತ್ತಾರೆ ಮುಸ್ಲಿಂ ಸಮುದಾಯದ ಮಹನೀಯರುಗಳು. ಅದೇ ಕಾರಣಕ್ಕೆ ಒಂದು ಕೋಟಿಗೂ ಅಧಿಕ ದುಡ್ಡು ಕೊಟ್ಟು ಈ ಕುರಿಯನ್ನು ಕೊಂಡುಕೊಳ್ಳಲಾಗಿದೆ.

 

ಈಗ ಒಂದು ಕೋಟಿಗೂ ಹೆಚ್ಚು ಹಣ ಕೊಟ್ಟು ಖರೀದಿಸಿದ ಈ ಮೇಕೆಯ ಮಾಲೀಕರು ಹೇಳುವುದೇನೆಂದರೆ, ಮೇಕೆಯ ಚರ್ಮದಲ್ಲಿ ಒಂದು ಕಡೆ ಅಲ್ಲಾ ಎಂದೂ, ಇನ್ನೊಂದು ಕಡೆ ಮಹಮ್ಮದ್ ಎಂದೂ ಬರೆದಂತೆ ಚರ್ಮದ ರೋಮದಲ್ಲಿ ಬರೆಯಲಾಗಿದೆ. ಹೀಗೆ ದೇವರ ಹೆಸರುಗಳನ್ನು ಎರಡೆರಡು ಕಡೆ ದೇಹದ ಮೇಲೆ ನೈಸರ್ಗಿಕವಾಗಿ ಹೊತ್ತಿರುವ ಈ ಮೇಕೆಗೆ ಈಗ ಅಲ್ಟ್ರಾ ಮಾಡರ್ನ್ ಕಾರಿನ ಬೆಲೆ ಬಂದಿದೆ.

 

ಬಕ್ರೀದ್ ಹಬ್ಬಕ್ಕೆ ವಿಶೇಷವಾಗಿ ಕೊಂದ ಈ ಮೇಕೆಯ ಹೆಸರು ಸುಲ್ತಾನ್. ಈ ಮೇಕೆಯನ್ನು ಮದ್ರಾಸಿನಲ್ಲಿ ಸಾಕಲಾಗಿದ್ದು, ಅದನ್ನು ಈಗ ಮುಂಬೈಗೆ ಕೊಂಡು ತರಲಾಗಿದೆ. ಈ ಮೇಕೆಯಿಂದ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಮುಸ್ಲಿಂ ಮಕ್ಕಳಿಗೆ ಉಚಿತ ಇಸ್ಲಾಮಿಕ್ ತರಬೇತಿ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಇನ್ನೊಬ್ಬರ ಟೀ ಶರ್ಟ್ ಹಾಕೊಳ್ಳಿ, ಕೈ ತುಂಬಾ ಹಣ ಗಳಿಸಿ !