Home News ಗೋವಾ ರಾಜ್ಯಕ್ಕೆ ಕರ್ನಾಟಕದಿಂದಲೇ ಸಪ್ಲೈ ಆಗುತ್ತಿದೆ ದಿನಕ್ಕೆ 2120 ಕೆಜಿ ಗೋಮಾಂಸ!!

ಗೋವಾ ರಾಜ್ಯಕ್ಕೆ ಕರ್ನಾಟಕದಿಂದಲೇ ಸಪ್ಲೈ ಆಗುತ್ತಿದೆ ದಿನಕ್ಕೆ 2120 ಕೆಜಿ ಗೋಮಾಂಸ!!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದ ಗೋಮಾಂಸ ವ್ಯಾಪಾರಿಗಳಿಂದ ಖರೀದಿಸಲಾಗುವ ಸುಮಾರು 2,100 ಕೆಜಿ ಗೋಮಾಂಸವನ್ನು ಗೋವಾದ ಜನರು ಪ್ರತಿದಿನ ಸೇವಿಸುತ್ತಾರೆ ಎಂದುಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ ಎಂದು ಹೆಸರಾಂತ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ ಹೇಳಿದೆ.

ಗೋವಾ ಶಾಸಕಾಂಗ ಸಭೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಅಧಿವೇಶನದಲ್ಲಿ ಮುಖ್ಯಮಂತ್ರಿ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಶಾಸಕ ಅಲೆಕ್ಸ್‌ ರೆಜಿನಾಲ್ಲೊ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು.

ಕಾಂಗ್ರೆಸ್ ಶಾಸಕನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಸಾವಂತ್, “ಕಳೆದ ಆರು ತಿಂಗಳಲ್ಲಿ 388 ಟನ್ ಗೋಮಾಂಸವನ್ನು ಕರ್ನಾಟಕದಿಂದ ಖರೀದಿಸಲಾಗಿದೆ. ಈ ಗೋಮಾಂಸವನ್ನು ದನಗಳು ಮತ್ತು ಎಮ್ಮೆ(cattle and buffalo)ಯಿಂದ ಪಡೆಯಲಾಗಿದೆ” ಎಂದು ಹೇಳಿದ್ದಾರೆ.

“ಸಕ್ಷಮ ಅಧಿಕಾರಿಗಳು ಸಂಗ್ರಹಿಸಿದ ಮಾಂಸ ತಪಾಸಣೆ ಶುಲ್ಕದ ಆಧಾರದ ಮೇಲೆ, 2,120 ಕೆಜಿ ಗೋಮಾಂಸವನ್ನು ಕರ್ನಾಟಕದಿಂದ ಪ್ರತಿನಿತ್ಯ ಬಳಕೆಗಾಗಿ ಪಡೆಯಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನು ಅಂಗೀಕರಿಸಿದ ನಂತರ ಗೋವಾದಲ್ಲಿ ಹಲವಾರು ತಿಂಗಳು ಗೋಮಾಂಸ ಕೊರತೆಯನ್ನು ಉಂಟಾಗಿತ್ತು ಎಂದು ಹೇಳಿದಲ್ಲದೇ ಮಹಾರಾಷ್ಟ್ರದಲ್ಲಿ ಕೂಡಾ ಇದೇ ರೀತಿಯ ಕಾನೂನು ಜಾರಿಗೆ ಬಂದ ನಂತರ, ಗೋವಾಕ್ಕೆ ತಾಜಾ ಗೋಮಾಂಸ ಮತ್ತು ಜಾನುವಾರುಗಳನ್ನು ಪೂರೈಕೆ ಮಾಡುತ್ತಿರುವ ಏಕೈಕ ಪ್ರಮುಖ ರಾಜ್ಯ ಕರ್ನಾಟಕವಾಗಿತ್ತು. ಗೋವಾ ಜನಸಂಖ್ಯೆಯ 30% ಕ್ಕಿಂತ ಹೆಚ್ಚು ಜನರು ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.