Home News ಸೆಕ್ಸ್ ಇಲ್ಲಿ ಬಲು ದುಬಾರಿ |ಒಂದು ಕಾಂಡೋಮ್ ನ ಬೆಲೆ ಬರೋಬ್ಬರಿ 60,000 ರೂಪಾಯಿ !!!

ಸೆಕ್ಸ್ ಇಲ್ಲಿ ಬಲು ದುಬಾರಿ |
ಒಂದು ಕಾಂಡೋಮ್ ನ ಬೆಲೆ ಬರೋಬ್ಬರಿ 60,000 ರೂಪಾಯಿ !!!

Hindu neighbor gifts plot of land

Hindu neighbour gifts land to Muslim journalist

ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ, ಕಾಂಡೋಮ್‌ಗಳನ್ನು ಸರ್ಕಾರವೇ ಜನರನ್ನು ಕರೆದು ಕರೆದು ಉಚಿತವಾಗಿ ಪೂರೈಸುತ್ತದೆ. ಕಾಂಡೋಮ್ ಗಳು ಅಂತಹಾ ದೇಶಗಳಲ್ಲಿ ಒಂದು ಅಗ್ಗದ ವಸ್ತು. ಆದರೆ ಇಲ್ಲೊಂದು ದೇಶದಲ್ಲಿ ಕಾಂಡೋಮ್ ನ ಬೆಲೆ ಕೇಳಿದ್ರೆ ಹೌಹಾರುವುದು ಖಂಡಿತ. ಇಷ್ಟು ದುಡ್ಡು ಕೊಟ್ಟು ಅದನ್ನು ಮಾಡೋದಕ್ಕಿಂತ ಕಂಬಳಿ ತಲೆತುಂಬಾ ಎಳೆದುಕೊಂಡು ಮಲಗೋದು ಲೇಸು ಅನ್ನಿಸದೆ ಇರದು.

ಹೌದು, ನಾವು ಹೇಳಿದ್ದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಅಲ್ಲಿ ಕಾಂಡೋಮ್ ಬೆಲೆ 60,000 ರೂಪಾಯಿಗೆ ನಿಗುರಿ ನಿಂತಿದೆ. ವೆನೆಜುವೆಲಾದ ಸಾಮಾನ್ಯ ಕಾಂಡೋಮ್‌ಗಳ ಬೆಲೆಯು ಪ್ರತಿಷ್ಠಿತ ಬ್ರ್ಯಾಂಡ್‌ನ ಟೆಲಿವಿಷನ್ ಅನ್ನು ಖರೀದಿಸುವ ಹಂತವನ್ನು ತಲುಪಿದೆ. ವೆನೆಜುವೆಲಾದ ಅಂಗಡಿಯೊಂದರಲ್ಲಿ ಕಾಂಡೋಮ್ ಪ್ಯಾಕೆಟ್ 60,000 ರೂ.ಗೆ ಮಾರಾಟವಾಗುತ್ತಿದೆ. ಕಾಂಡೋಮ್ ಗಳಿಲ್ಲದೆ ಆ ದೇಶಾದ್ಯಂತ ಕೋಲಾಹಲ ಎದ್ದಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೆನೆಜುವೆಲಾ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಗರ್ಭಪಾತ ನಿಷೇಧದ ಬಗ್ಗೆ ಹಲವು ರಾಷ್ಟ್ರಗಳಲ್ಲಿ ವಿವಿಧ ರೀತಿಯ ಕಾನೂನುಗಳಿವೆ. ವೆನೆಜುವೆಲಾದಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ ಎಂದು ತಿಳಿದಿದೆ. ಆ ದೇಶದಲ್ಲಿ ಯಾರಾದರೂ ಹಾಗೆ ಮಾಡಿದರೆ, ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ಕಾಯುತ್ತಿದೆ. ಯುಎನ್‌ನ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2015 ರ ಪ್ರಕಾರ, ವೆನೆಜುವೆಲಾ ಅತಿ ಹೆಚ್ಚು ಹದಿಹರೆಯದ ಹುಡುಗಿಯರು ಗರ್ಭ ಧರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕಾಂಡೋಮ್ ನ ಬೆಲೆ ಎಗರಿ ಆಕಾಶ ನೋಡುತ್ತಿರುವುದು ವೆನೆಜುವೆಲಾದಲ್ಲಿ ಸಂಚಲನ ಮೂಡಿಸಿದೆ.

ಅತ್ತ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಇನ್ನೊಂದು ಕಡೆ ಅಪ್ರಾಪ್ತ ಹುಡುಗ ಹುಡುಗಿಯರಿಗೆ ಸೆಕ್ಸ್ ನಲ್ಲಿ ತೀವ್ರ ಆಸಕ್ತಿ. ಚಿಕ್ಕ ವಯಸ್ಸಿಗೇ ಅದು ಬೇಕು ಅವರಿಗೆ. ಮಗದೊಂದು ಕಡೆ ಕಾಂಡೋಮ್ ಕೊಳ್ಳೋಣವೆಂದರೆ ಒಂದಕ್ಕೆ 60,000 ರೂಪಾಯಿ ಎಣಿಸಬೇಕು. ಈ ದುಡ್ಡಲ್ಲಿ ಒಂದು ಮೋಟಾರ್ ಸೈಕಲ್ಲು ಕೊಂಡು ಅದನ್ನೇ ಚನ್ನಾಗಿ ಪೆಡಲ್ ಹೊಡೆಯಬಹುದು ಎಂದು ತಮಾಷೆಯಾಗಿ ಹೇಳುತ್ತಿದ್ದಾರೆ ವೆನೆಜುವಾಲದ ಹುಡುಗರು !

ಈಗ ದೇಶದಲ್ಲಿ ಕಾಂಡೋಮ್‌ಗಳ ಬೆಲೆ 60,000 ರೂಪಾಯಿಗಳಿಗೆ ತಲುಪಲು ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ. ಈ ಮಧ್ಯೆ, ವೆನೆಜುವೆಲಾದ ಕಾಂಡೋಮ್‌ಗಳ ಬೆಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಂಡೋಮ್ಗಳ ಬೆಲೆಯು ಮಟ್ಟವನ್ನು ಮೀರಿದ್ದರೂ ಅಲ್ಲಿನ ಸರ್ಕಾರ ಇನ್ನೂ ಸರಿಯಾದ ಕ್ರಮ ಕೈಗೊಂಡಿಲ್ಲ. ಅಲ್ಲಿಯತನಕ ಹದಿಹರೆಯದವರು ಕಾಯಲು ಪುರುಸೊತ್ತಿಲ್ಲ. ಆ ಕಾರಣದಿಂದಲೇ ಪುಟಾಣಿ ಗರ್ಭವತಿಯರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೀತಿದೆ.