Home News Bengaluru : ರಾಜಧಾನಿಯಲ್ಲಿ ಶುರುವಾಗಿದೆ ಕೆಟ್ಟ ದಂಧೆ- ಸುಖಕ್ಕಾಗಿ ನಡೆಯುತ್ತೆ ಗರ್ಲ್ ಫ್ರೆಂಡ್ ಎಕ್ಸ್​ಚೇಂಜ್​ !!

Bengaluru : ರಾಜಧಾನಿಯಲ್ಲಿ ಶುರುವಾಗಿದೆ ಕೆಟ್ಟ ದಂಧೆ- ಸುಖಕ್ಕಾಗಿ ನಡೆಯುತ್ತೆ ಗರ್ಲ್ ಫ್ರೆಂಡ್ ಎಕ್ಸ್​ಚೇಂಜ್​ !!

Hindu neighbor gifts plot of land

Hindu neighbour gifts land to Muslim journalist

Bengaluru : ರಾಜ್ಯ ರಾಜಧಾನಿ ಬೆಂಗಳೂರಲ್ಲಿ(Bengaluru) ಅತಿ ಕೆಟ್ಟದಾದಂತಹ ದಂಧೆ ಎಂದು ಬೆಳಕಿಗೆ ಬಂದಿದ್ದು ಈ ವಿಚಾರ ತಿಳಿದರೆ ಕೇಳುಗರ ಮನಸ್ಸಲ್ಲಿ ಈ ಪಾಪಿಗಳ ಮೇಲೆ ಅಸಹ್ಯ ಮೂಡುತ್ತದೆ. ಯಾಕೆಂದರೆ ಈ ಪಾಪಿಗಳು ವರಂತ್ಯದ ಪಾರ್ಟಿಗಳಿಗೆ ಹೋಗಿ ತಮ್ಮ ಗೆಳತಿಯರನ್ನು ಅದಲು ಬದಲು ಮಾಡಿಕೊಂಡು ಮಲಗುತ್ತಾರಂತೆ.

 

ವಾರಾಂತ್ಯದ ಪಾರ್ಟಿಗಳಿಗೆ ತಮ್ಮ ಸ್ನೇಹಿತೆಯರನ್ನು (GirlFriend) ಕರೆದೊಯ್ದು ಅವರನ್ನು ಬದಲಾಯಿಸಿಕೊಂಡು ಮೋಜು ಮಾಡುತ್ತಿರುವಂತಹ ಅಸಹ್ಯಕರ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಈ  ಸಂಬಂಧ ಹರೀಶ್ ಹಾಗೂ ಹೇಮಂತ್ ಎಂಬುವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 

ಒತ್ತಡಕ್ಕೆ ಮಣಿದು ಸಹಕರಿಸಿದ ಗೆಳತಿ :

ಕೆಲ ದಿನಗಳ ಹಿಂದೆ ಹರೀಶ್‌ಗೆ ಯುವತಿಯೊಬ್ಬಳು ಪರಿಚಯವಾಗಿದ್ದಳು. ಕ್ರಮೇಣ ಪರಸ್ಪರ ಸಲುಗೆ ಬೆಳೆದಿತ್ತು. ಈ ಸ್ನೇಹದಲ್ಲಿ ಆಗಾಗ್ಗೆ ಪಾರ್ಟಿಗಳಿಗೆ ಈ ಜೋಡಿ ಹಾಜರಾಗುತ್ತಿತ್ತು. ಆ ವೇಳೆ ತನ್ನ ಸ್ನೇಹಿತ ಹೇಮಂತ್‌ಗೆ ಗೆಳೆತಿಯನ್ನು ಹರೀಶ್ ಪರಿಚಯ ಮಾಡಿಕೊಟ್ಟ. ಆ ಪಾರ್ಟಿ ಮುಗಿದ ನಂತರ ಏಕಾಂತವಾಗಿ ಗೆಳೆಯನ ಜತೆ ಕಳೆಯಲು ಸ್ನೇಹಿತೆಗೆ ಹರೀಶ್‌ ಒತ್ತಾಯಿಸಿದ್ದ. ಈ ಒತ್ತಡಕ್ಕೆ ಮಣಿದು ಆಕೆ ಸಹಕರಿಸಿದ್ದಳು ಎನ್ನಲಾಗಿದೆ. ಬಳಿಕ ವಾಟ್ಸ್‌ ಆಪ್‌ನಲ್ಲಿ ‘ಸ್ವಿಂಗರ್ಸ್’ ಎಂಬ ಗ್ರೂಪ್ ಮಾಡಿಕೊಂಡು ಹೇಮಂತ್ ಹಾಗೂ ಹರೀಶ್‌, ಸ್ನೇಹಿತೆಯರನ್ನು ಬದಲಾಯಿಸಿಕೊಂಡು ಮೋಜಿ ಮಾಡುವ ದಂಧೆ ಶುರು ಮಾಡಿದ್ದರು.

 

ಇದಕ್ಕಾಗಿ ನಗರದ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳಿಗೆ ಜೋಡಿ ಹಕ್ಕಿಗಳಂತೆ ಹೋಗಿ ಬಳಿಕ ಪರಸ್ಪರ ಗೆಳೆತಿಯನ್ನು ಬದಲಾಯಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ತನ್ನ ಸ್ನೇಹಿತನ ಜತೆ ಏಕಾಂತಕ್ಕೆ ಗೆಳೆತಿಯನ್ನು ಹರೀಶ್ ಒತ್ತಾಯಿಸಿದ್ದ. ಆದರೆ ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆಗ ಖಾಸಗಿ ವಿಡಿಯೋ ಹಾಗೂ ಪೋಟೋ ಮುಂದಿಟ್ಟು ಆರೋಪಿ ಬೆದರಿಸಿದ್ದಾನೆ. ಈ ಕಿರುಕುಳ ಸಹಿಸಲಾರದೆ ಕೊನೆಗೆ ಆಕೆಗೆ ಪೊಲೀಸರಿಗೆ ದೂರು ಕೊಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಈ ಪಾಪಿಗಳು ವಾಟ್ಸಾಪ್ ಗ್ರೂಪ್ ಗಳ ಮೂಲಕ ಎಲ್ಲರ ಸಂಪರ್ಕ ಮಾಡುತ್ತಿದ್ದರು. ಮುಂಚೆಯೇ ಪ್ಲಾನ್ ಮಾಡಿಕೊಳ್ಳುತ್ತಿದ್ದ ಬಂಧಿತರು ಗರ್ಲ್ ಫ್ರೆಂಡ್ ಗಳನ್ನ ಮರಳು ಮಾಡಿ ಪರಸ್ಪರ ಎಕ್ಸ್ ಚೇಂಜ್ ಮಾಡಿಕೊಂಡು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇನ್ನು , ಅನೇಕ ಮಂದಿ ಗರ್ಲ್ ಫ್ರೆಂ ಡ್ ಸ್ವಾಪಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು , ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.