Home News 11 ವರ್ಷದ ಬಾಲಕಿಗೆ ಪ್ರತಿದಿನ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ | ಇದೀಗ ಆಂಟಿ ವಿರುದ್ಧ...

11 ವರ್ಷದ ಬಾಲಕಿಗೆ ಪ್ರತಿದಿನ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ | ಇದೀಗ ಆಂಟಿ ವಿರುದ್ಧ ಎಫ್‍ಐಆರ್ !!

Hindu neighbor gifts plot of land

Hindu neighbour gifts land to Muslim journalist

11 ವರ್ಷದ ಬಾಲಕಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಮಹಿಳೆ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಆರೋಪಿ ಮಹಿಳೆ ಭೋಪಾಲ್ ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಆಕೆಯ ಬಂಧನಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ಗ್ವಾಲಿಯರ್ ಠಾಣೆಯ ಇನ್‍ಸ್ಪೆಕ್ಟರ್ ಸಂಜೀವ್ ಶರ್ಮಾ, ಜನ್‍ಕಂಗಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ತನ್ನ 11 ವರ್ಷದ ಮಗಳ ಮೊಬೈಲ್ ಗೆ ಮಧ್ಯ ವಯಸ್ಕ ಮಹಿಳೆಯೊಬ್ಬರು ಪ್ರತಿನಿತ್ಯ ಅಶ್ಲೀಲ ವೀಡಿಯೋ ಕಳುಹಿಸುತ್ತಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಈ ರೀತಿ ವೀಡಿಯೋ ಕಳಿಸೋದು ನಿಲ್ಲಿಸುವಂತೆ ತಿಳಿ ಹೇಳಿದ್ರೂ ಮಹಿಳೆ ಕೇಳುತ್ತಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇವೆ. ಈ ಘಟನೆ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯವಾಗಿ ನನ್ನ ಪತಿ ಮತ್ತು ಮಹಿಳೆ ನಡುವೆ ವಿವಾದ ಉಂಟಾಗಿತ್ತು. ಆ ಕಾರಣಕ್ಕಾಗಿ ಈ ರೀತಿ ವೀಡಿಯೋ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆ ನೀಡಿದ ದೂರಿನನ್ವಯ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆ ಐಟಿ ಆ್ಯಕ್ಟ್ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಮಹಿಳೆಯ ಬಂಧನಕ್ಕಾಗಿ ನಮ್ಮ ತಂಡ ಭೋಪಾಲ್ ಗೆ ತೆರಳಿದೆ. ಮಹಿಳೆಯ ಬಂಧನದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಸಂಜೀವ್ ಶರ್ಮಾ ಹೇಳಿದ್ದಾರೆ.