Home News ಬರೋಬ್ಬರಿ ನಾಲ್ಕು ವರ್ಷದ ಪ್ರೀತಿ, ಪ್ರೀತಿ ಮೇಲೆ ಯಾರ ಕಣ್ಣು ಬಿತ್ತೋ? ಸುಂದರ ಹುಡುಗ ಈ...

ಬರೋಬ್ಬರಿ ನಾಲ್ಕು ವರ್ಷದ ಪ್ರೀತಿ, ಪ್ರೀತಿ ಮೇಲೆ ಯಾರ ಕಣ್ಣು ಬಿತ್ತೋ? ಸುಂದರ ಹುಡುಗ ಈ ನಿರ್ಧಾರ ತಗೊಂಡ!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಅನ್ನೋದು ಮಾಯೆ ಎಂದು ಗೊತ್ತಿದ್ದರೂ ಪ್ರೀತಿಗೆ ಸೋಲದವರಿಲ್ಲ. ಕೆಲವೊಮ್ಮೆ ಪ್ರೀತಿಸುವ ವಿಷಯದಲ್ಲಿ ಹೆಣ್ಣು ಯಾರನ್ನು ಯಾವಾಗ ಯಾಮಾರಿಸುತ್ತಾಳೆ ಅನ್ನೋದು ಊಹಿಸೋಕೆ ಸಾಧ್ಯ ಆಗಲ್ಲ. ಹಾಗೆಯೇ ಪ್ರೀತಿ ಕೆಲವೊಮ್ಮೆ ಅನಾಹುತದಲ್ಲಿ ಕೊನೆಗೊಳ್ಳುವ ಎಷ್ಟೋ ನಿದರ್ಶನ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬ ಪ್ರೀತಿಸಿದ ಹುಡುಗಿ ಕೈಕೊಟ್ಟು ಮೋಸ ಮಾಡಿದಳೆಂದು ನೇಣಿಗೆ ಶರಣಾಗಿದ್ದಾನೆ.

ಹಾಸನದ ಪ್ರತಿಷ್ಠಿತ ಹೊಟೆಲ್ ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಸುಮಾರು 26 ವರ್ಷದ ಕಾರ್ತಿಕ್ ಎಂಬವನು ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲ್ಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ, ಜನವರಿ 27 ರಂದು ತಾನು ಚೆನ್ನೈಲಿದ್ದು ಅಲ್ಲಿಗೇ ಬರುವಂತೆ ಯುವತಿ ಕರೆದಿದ್ದಾಳೆ. ಈತ ಆಕೆಯ ಮಾತನ್ನು ನಂಬಿಕೊಂಡು ಪ್ರೀತಿಗಾಗಿ ಯುವಕ ಕಾರ್ತಿಕ್ ಅಲ್ಲಿ ಇಲ್ಲಿ ಹಣವನ್ನು ಹೊಂದಿಸಿಕೊಂಡು ಚೆನ್ನೈ ಗೆ ಓಡೋಡಿ ಹೋಗಿದ್ದಾನೆ. ಆದರೆ, ಚೆನ್ನೈಗೆ ಹೋದ ಬಳಿಕ ಯುವತಿ ತಾನು ಹಾಸನದಲ್ಲೇ ಇರೋದಾಗಿ ಹೇಳುವ ಮೂಲಕ ಯಾಮಾರಿಸಿದ್ದಾಳೆ.

ಇದೇ ರೀತಿ ಹಲವು ಬಾರಿ ಯುವತಿಯು ಕಾರ್ತೀಕನನ್ನು ಯಾಮಾರಿಸಿದ್ದು ಇದರಿಂದ ಆತ ಮನನೊಂದು ಹೋಗಿದ್ದು ನಂತರ ಚೆನೈನಲ್ಲಿ ತಂಗಲು ರೂಮ್‌ಮಾಡಿದ್ದ ಲಾಡ್ಜ್‌ನಲ್ಲಿಯೇ ಯುವಕ ನೇಣಿಗೆ ಶರಣಾಗಿದ್ದಾನೆ.

ಇನ್ನು ಹುಡುಗನನ್ನು ನಂಬಿಸಿ ಮೋಸಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಜೊತೆಗೆ, ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸುತ್ತಿದ್ದು, ಪೋಷಕರ ಅಳಲು ಮುಗಿಲು ಮುಟ್ಟಿದೆ.

ಘಟನೆಗೆ ಕುರಿತಂತೆ ಚೆನ್ನೈನ ಆರಂಬಕ್ಕಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹವನ್ನು ಹಾಸನಕ್ಕೆ ತರಲಾಗಿದೆ. ಸದ್ಯ ಸಾವಿಗೆ ಕಾರಣವಾದ ಯುವತಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಾಸನ ನಗರದ ನಿವಾಸಿಗಳು ಆಗ್ರಹಿಸಿದ್ದು ಇನ್ನು ಮುಂದೆ ಈ ರೀತಿ ಯಾರಿಗೂ ಮೋಸ ಆಗಬಾರದು ಎಂದು ಪೊಲೀಸರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.