Home News Ashwini Gowda: ‘ಗಿಲ್ಲಿ ಬಡವನ ಗೆಟಪ್ ಹಾಕಿ ಬಿಗ್ ಬಾಸ್ ವಿನ್ ಆಗಿದ್ದಾನೆ’ – ಅಶ್ವಿನಿ...

Ashwini Gowda: ‘ಗಿಲ್ಲಿ ಬಡವನ ಗೆಟಪ್ ಹಾಕಿ ಬಿಗ್ ಬಾಸ್ ವಿನ್ ಆಗಿದ್ದಾನೆ’ – ಅಶ್ವಿನಿ ಗೌಡ ಸ್ಟೇಟ್ಮೆಂಟ್

Hindu neighbor gifts plot of land

Hindu neighbour gifts land to Muslim journalist

Ashwini Gowda : ಬಿಗ್ ಬಾಸ್ ಸೀಸನ್ ಕನ್ನಡ 12 ನೆನ್ನೆ ತಾನೆ ಗ್ರಾಂಡ್ ಫಿನಾಲೆಯ ಮುಖಾಂತರ ತೆರೆಕಂಡಿದ್ದು, ಎಲ್ಲರ ನೆಚ್ಚಿನ ನಟ ಗಿಲ್ಲಿ ವಿನ್ನರ್ ಆದರೆ ರಕ್ಷಿತಾ ಶೆಟ್ಟಿ, ರನ್ನರಪ್ ಆಗಿ ಹೊರಹೊಮ್ಮಿದ್ದಾರೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ ಆಗಲೇಬೇಕೆಂದು ನಾಡಿನ ಜನರ ಮಹಾದಾಸೆಯಾಗಿತ್ತು. ಅದರಂತೆ ಈಗ ಆಗಿದೆ. ಆದರೆ ಈ ಬೆನ್ನಲ್ಲೇ ಅಶ್ವಿನಿ ಗೌಡ ಅವರು ‘ಗಿಲ್ಲಿ ಬಡವನ ಗೆಟಪ್ ಹಾಕಿಕೊಂಡು ಬಿಗ್ ಬಾಸ್ ವಿನ್ನ ಆಗಿದ್ದಾನೆ’ ಎಂಬ ಸ್ಟೇಟ್ಮೆಂಟ್ ಪಾಸ್ ಮಾಡಿದ್ದಾರೆ.

ಹೌದು, ಗಿಲ್ಲಿ ಗೆದ್ದಿರುವ ವಿಚಾರಕ್ಕೆ ಅಶ್ವಿನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಗಿಲ್ಲಿ ಅವರ ಬಗ್ಗೆ ಸಾಕಷ್ಟು ವಿಚಾರದ ಬಗ್ಗೆ ಅವರು ಮಾತನಾಡಿದ್ದು, ಗಿಲ್ಲಿ ಬಡವನಲ್ಲ ಎಂದಿರುವ ಅವರ ಮಾತು ವೈರಲ್‌ ಆಗಿದೆ.

“ಬಡವರ ಮಕ್ಕಳು ಗೆಲ್ಲಬೇಕು. ಆದರೆ ಗಿಲ್ಲಿ ನಿಜವಾಗಲೂ ಬಡವನಾ? ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ. ಬಹುಶಃ ಅವರ ಆಟ ಎಲ್ಲರಿಗೂ ಇಷ್ಟವಾಗಿದೆ ಇರಬೇಕು. ಗಿಲ್ಲಿಯನ್ನು ಬಡವ ಅಂತ ಕರೆಯೋದು ತಪ್ಪಾಗುತ್ತದೆ. ಅವರ ವ್ಯಕ್ತಿತ್ವ ಆಟದ ಬಗ್ಗೆ ನನಗೆ ಖಂಡಿತವಾಗಿಯೂ ನನಗೆ ಖುಷಿಯಾಗಿದೆ. ಅವರಿಗೆ ಒಳ್ಳೆಯದಾಗಲಿ. ಬಡವ ಎನ್ನುವ ಸ್ಟಾಟರ್ಜಿಯನ್ನು ಇಲ್ಲಿ ಬಳಸುವುದು ತಪ್ಪು ಎಂದು ಅಶ್ವಿನಿ ಹೇಳಿದ್ದಾರೆ.

ಅಲ್ಲದೆ ಯುದ್ಧ ಮಾಡಬೇಕಾದ್ರೆ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರ್ತೀವಿ. ಬಿಗ್‌ ಬಾಸ್‌ ಮುಗಿದ ಮೇಲೆ ಕತ್ತಿಯನ್ನು ಕೆಳಗಡೆ ಇಡ್ತೀವಿ. ಮತ್ತೆ ಅದನ್ನು ಕೈಗೆ ಎತ್ತಿಕೊಳ್ಳಲು ನನಗೆ ಇಷ್ಟ ಇಲ್ಲ. ಹಾಗಾಗಿ, ಗಿಲ್ಲಿ ಗೆದ್ದಿದ್ದಾರೆ. ಅವರ ಭವಿಷ್ಯ ಉಜ್ವಲ ಆಗ್ಲಿ, ಒಳ್ಳೆದಾಗ್ಲಿ. ನನ್ನನ್ನು ಅತ್ತೆ ಮಗಳು ಅಂತ ಕರೆದಿದ್ದಾರೆ. ನಾನು ಅವರನ್ನ ಮಾವನ ಮಗ ಅಂತ ಕರೆದಿದ್ದೀನಿ. ಖಂಡಿತ ಒಳ್ಳೆದಾಗಬೇಕು ಎಂದು ಆಶಿಸಿದ್ದಾರೆ.