Home News Hania Aamir: ಪಾಕ್‌ ನಟಿ ಹನಿಯಾ ಆಮೀರ್‌ಗೆ ನೀರಿನ ಬಾಟಲಿ ಗಿಫ್ಟ್‌!

Hania Aamir: ಪಾಕ್‌ ನಟಿ ಹನಿಯಾ ಆಮೀರ್‌ಗೆ ನೀರಿನ ಬಾಟಲಿ ಗಿಫ್ಟ್‌!

Hindu neighbor gifts plot of land

Hindu neighbour gifts land to Muslim journalist

Hania Aamir: ಸಿಂಧೂ ನದಿ ನೀರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದ ಸುದ್ದಿಗಳ ಬೆನ್ನಲ್ಲೇ ಪಾಕಿಸ್ತಾನದ ಜನಪ್ರಿಯ ನಟಿ ಹನಿಯಾ ಆಮಿರ್‌ ಅವರಿಗೆ ಭಾರತೀಯ ಅಭಿಮಾನಿಗಳು ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ಹನಿಯಾ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋವೊಂದರಲ್ಲಿ ಭಾರತೀಯ ಅಭಿಮಾನಿಗಳು ಕಳುಹಿಸಿದ ಉಡುಗೊರೆಗಳನ್ನು ತೆರೆಯುತ್ತಿದ್ದು, ಅದರಲ್ಲಿ ನೀರಿನ ಬಾಟಲಿಗಳು ಇರುವುದು ಪತ್ತೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉಡುಗೊರೆಗಳ ಬಾಕ್ಸ್‌ನಲ್ಲಿ ತಿಂಡಿ ತಿನಿಸುಗಳು, ಆಭರಣಗಳ ಜೊತೆ ಕೆಲವು ನೀರಿನ ಬಾಟಲಿಗಳು ಇದ್ದವು. ಇದರ ಜೊತೆಗೆ ಒಂದು ಚೀಟಿ ಕೂಡಾ ಇತ್ತು. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮಾರ್ಪಾಡಿಸಲು ಪಾಕಿಸ್ತಾನಕ್ಕೆ ನೋಟಿಸ್‌ ನೀಡಿರುವ ಸುದ್ದಿಯ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿ ನೀರಿನ ಅಭಾವ ಉಂಟಾಗಬಹುದು ಎನ್ನು ತಮಾಷೆಯ ಧಾಟಿಯಲ್ಲಿ ಈ ನೀರಿನ ಬಾಟಲಿಗಳನ್ನು ಕಳುಹಿಸಿದ್ದರು ಎನ್ನಲಾಗಿದೆ.

ಈ ವಿಶೇಷ ಉಡುಗೊರೆಯನ್ನು ನೋಡಿ ಹನಿಯಾ ಅಮಿರ್‌ ನಕ್ಕಿದ್ದಾರೆ.