Home News Vittla: ಮಾಡತ್ತಡ್ಕದಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣ: ಇಬ್ಬರ ಮೇಲೆ ಎಫ್‌ಐಆರ್ ದಾಖಲು

Vittla: ಮಾಡತ್ತಡ್ಕದಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣ: ಇಬ್ಬರ ಮೇಲೆ ಎಫ್‌ಐಆರ್ ದಾಖಲು

Hindu neighbor gifts plot of land

Hindu neighbour gifts land to Muslim journalist

Vittla: ವಿಟ್ಲ (Vittla) ಮಾಡತ್ತಡ್ಕದಲ್ಲಿ ಕ್ವಾರೆ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿಟ್ಲ ಮಾಡತ್ತಡ್ಕದ ಎನ್.ಎಸ್ ಕೋರೆಯ ಬಳಿಯ ಮೋನಪ್ಪ ಪೂಜಾರಿ ಅವರ ಜಾಗದಲ್ಲಿರುವ ಕಲ್ಲು ಬಂಡೆಗಳ ಬಳಿ ಆರೋಪಿಗಳು ಸ್ಪೋಟಕಗಳಾದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್‌ಗಳು ಇಟ್ಟಿದ್ದರು. ಆ ಸ್ಫೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡಿದ್ದು, ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಅವರ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಸುತ್ತಮುತ್ತಲಿನ ಮರಗಿಡಗಳು ಸುಟ್ಟು ಹೋಗಿವೆ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಸ್ಫೋಟಕಗಳನ್ನು ಕ್ಯಾರಿಯ ಬಳಿ ಇಟ್ಟಿರುವ ಕುರಿತು ಬಂಟ್ವಾಳ ತಾಲ್ಲೂಕಿನ ಕಾವಳಪಡೂರಿನ ಶ್ರೀರಾಮ್ ಕನ್‌ಸ್ಟ್ರಕ್ಷನ್‌ನ ಅಶೋಕ ಮತ್ತು ಅದರ ಸ್ಪೋಟದ ಕೆಲಸ ಮಾಡುತ್ತಿದ್ದವನ ವಿರುದ್ಧ 1884ರ ಸ್ಪೋಟಕಗಳ ಕಾಯ್ದೆಯ ಸೆಕ್ಷನ್ 9ಬಿ (ಸ್ಪೋಟಕಗಳನ್ನು ಸಾಗಿಸುವುದು) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288ರ (ಸ್ಪೋಟಕಗಳನ್ನು ಅಜಾಗರೂಕತೆಯಿಂದ ನಿರ್ವಹಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.