Home News Protest: ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರಿಹಾರಕ್ಕಾಗಿ ಹೋರಾಟ – ಆ.7ಕ್ಕೆ ಸಮಾಲೋಚನಾ ಸಭೆ

Protest: ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರಿಹಾರಕ್ಕಾಗಿ ಹೋರಾಟ – ಆ.7ಕ್ಕೆ ಸಮಾಲೋಚನಾ ಸಭೆ

Hindu neighbor gifts plot of land

Hindu neighbour gifts land to Muslim journalist

Protest: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಘಟನೆಯ ಕಡೆಯಿಂದ ಆಗಸ್ಟ್ 07ರಂದು, ಗುರುವಾರ ಬೆಳಿಗ್ಗೆ ಸರಿಯಾಗಿ 11 ಗಂಟೆಗೆ ಸುಬ್ರಹ್ಮಣ್ಯದ ಐನೇಕಿದು ಸೊಸೈಟಿ ಬಳಿ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಪರಿಹಾರಕ್ಕಾಗಿ ಹೋರಾಟ ನಡೆಸಲು ಸಮಾಲೋಚನೆ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಮುಖ್ಯವಾಗಿ ಫ್ಲಾಟಿಂಗ್ ಆಗದ ಜಾಗದಲ್ಲಿ ತಕ್ಷಣ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿ ರೈತರ ಹಕ್ಕುಪತ್ರ ಇರುವ ಜಾಗಕ್ಕೆ ಪ್ಲಾಟಿಂಗ್ ಮಾಡಿಕೊಡಬೇಕು. ಗುಂಡ್ಯದಲ್ಲಿ ಅರಣ್ಯ ಇಲಾಖೆ ಮಾಡುವ ಆನೆ ಕ್ಯಾಂಪಸ್ ನ ಬಗ್ಗೆ ಸಾಧಕ ಬಾಧಕದ ಕುರಿತು ಚರ್ಚೆ ಮಾಡಲಿದೆ. ಮತ್ತು ಆನೆ ದಾಳಿಯಿಂದ ಬಲಿಯಾದವರಿಗೆ ಪರಿಹಾರ ಮೊತ್ತವನ್ನು ಒಂದು ಕೋಟಿ ರೂ ನಿಗದಿಪಡಿಸಬೇಕು. ಕೃಷಿ ನಾಶ ಮಾಡಿದ್ದಲ್ಲಿ ರೈತರಿಗೆ ಪರಿಹಾರವನ್ನು ತಕ್ಷಣ ನೀಡಬೇಕು ಹಾಗೂ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಮತ್ತು ಪಶ್ಚಿಮ ಘಟ್ಟಗು ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡಿ ಆನೆ ಸೇರಿದಂತೆ ಪ್ರಾಣಿಗಳು ಬರದ ಹಾಗೆ ಆನೆ ಕಂದಕ ನಿರ್ಮಾಣ ಮಾಡಿ ಸೋಲಾರ್ ಬೇಲಿಯನ್ನು ಹಾಕುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

ಆದುದ್ದರಿಂದ ರೈತರು ಜೊತೆಗೆ ರೈತರ ಬಗ್ಗೆ ಕಾಳಜಿ ಇರುವ ಗಣ್ಯರು ವಿವಿಧ ಸಂಘ-ಸಂಸ್ಥೆಯ ಪ್ರಮುಖರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಈ ಸಭೆಯಲ್ಲಿ ಬಂದು ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಕೈಜೋಡಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mangalore: ಉಳ್ಳಾಲ: ಪೊಲೀಸ್‌ ಸಿಬ್ಬಂದಿಗೆ ಜೀವ ಬೆದರಿಕೆ; ಆರೋಪಿಯ ಬಂಧನ!