Home News Ganesh Festival: ಗಣೇಶ ಹಬ್ಬ, ಬಿಬಿಎಂಪಿಯಿಂದ ಹೊಸ ರೂಲ್ಸ್‌, ಪಾಲನೆ ಕಡ್ಡಾಯ

Ganesh Festival: ಗಣೇಶ ಹಬ್ಬ, ಬಿಬಿಎಂಪಿಯಿಂದ ಹೊಸ ರೂಲ್ಸ್‌, ಪಾಲನೆ ಕಡ್ಡಾಯ

Ganesha Chaturthi

Hindu neighbor gifts plot of land

Hindu neighbour gifts land to Muslim journalist

Ganesh Festival: ಗೌರಿ ಗಣೇಶ ಹಬ್ಬದ ದಿನ ಹತ್ತಿರ ಬರುತ್ತಿದ್ದಂತೆ ಇದೀಗ ಬಿಬಿಎಂಪಿ ಕೆಲವು ಸೂಚನೆ ಮತ್ತು ನಿಯಮಗಳ ಕುರಿತು ತಿಳಿಸಿದೆ. ಗಣೇಶ ಹಬ್ಬದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಬಿಎಂಪಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಪಿಓಪಿ ಗಣೇಶ ಸಂಪೂರ್ಣ ನಿಷೇಧ ಮಾಡಲಾಗಿದೆ!
ಆಗಸ್ಟ್‌ 27 ರಂದು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಲರ್ಟ್‌ ಆಗಿರುವ ಬಿಬಿಎಂಪಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲು ಕಮಿಷನರ್‌ ಕರೆ ನೀಡಿದ್ದಾರೆ. ಪಿಓಪಿ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುವವರ ಮೇಲೆ ಕೇಸು ದಾಖಲು ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. 40ಕ್ಕೂ ಹೆಚ್ಚು ಕೆರೆಗಳ ಬಳಿ ಕಲ್ಯಾಣಿಗಳು ಪ್ರತ್ಯೇಕ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲಾಗಿದೆ.

ಶಬ್ದ ಹಾಗೂ ಪರಿಸರ ಮಾಲಿನ್ಯ ತಡೆಗೆ ಬಿಬಿಎಂಪಿ ಕೆಲವು ಕ್ರಮ ತೆಗೆದುಕೊಂಡಿದೆ. ಪರಿಸರ ಮಾಲಿನ್ಯವಾಗದಂತೆ ಕಡಿಮೆ ಪಟಾಕಿ ಬಳಕೆಗೆ ಸೂಚನೆ ನೀಡಲಾಗಿದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸುವಂತೆ ಯುವ ಪೀಳಿಗೆಗೆ ಬಿಬಿಎಂಪಿ ಕಮಿಷನರ್‌ ಕರೆ ನೀಡಿದ್ದಾರೆ.