Home News Ganesh Chaturthi: ಗಣೇಶ ಹಬ್ಬಕ್ಕೆ ವಿಗ್ರಹ ಕೂರಿಸುವವರು ತಪ್ಪದೇ ಪಾಲಿಸಬೇಕು ಈ ನಿಯಮ, ಇಲ್ಲಾಂದ್ರೆ 10...

Ganesh Chaturthi: ಗಣೇಶ ಹಬ್ಬಕ್ಕೆ ವಿಗ್ರಹ ಕೂರಿಸುವವರು ತಪ್ಪದೇ ಪಾಲಿಸಬೇಕು ಈ ನಿಯಮ, ಇಲ್ಲಾಂದ್ರೆ 10 ಸಾವಿರ ದಂಡ, ಜೈಲು ಫಿಕ್ಸ್ !!

Ganesh Chaturthi

Hindu neighbor gifts plot of land

Hindu neighbour gifts land to Muslim journalist

Ganesh Chaturthi: ಗಣೇಶ ಹಬ್ಬಕ್ಕೆ ಸರ್ಕಾರ ಪ್ರತೀ ವರ್ಷವೂ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಈ ಸಲವೂ ಕೂಡ ಸರ್ಕಾರ ಕೆಲವು ಕಟ್ಟುನಿಟ್ಟಿನ ರೂಲ್ಸ್ ಜಾರಿಗೊಳಿಸಿದೆ. ಅದಲ್ಲೂ ಈ ಒಂದು ನಿಯಮವನ್ನು ಪಾಲಿಸದಿದ್ದರೆ ಸರ್ಕಾರ 10 ಸಾವಿರ ದಂಡ ಹಾಕೋದಾಗಿ ಆದೇಶ ಹೊರಡಿಸಿದೆ.

ಹೌದು, ಗೌರಿ-ಗಣೇಶನ(Gouri-Ganesh) ವಿಗ್ರಹ ಪ್ರತಿಷ್ಠಾಪನೆ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿಯಮವನ್ನು ಹೊರಡಿಸಿದೆ. ಅದೇನೆಂದರೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು ವಿಷಕಾರಿ ರಾಸಾಯನಿಕ ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರೀಸ್(POP) ಅಂತಹ ಪರಿಸರಕ್ಕೆ ಹಾನಿ ಮಾಡುವಂತಹ ಸಾಮಾಗ್ರಿಗಳಿಂದ ತಯಾರಿಸಿದ ವಿಗ್ರಹಗಳನ್ನು ಬಳಸದೆ ಪರಿಸರ ಸ್ನೇಹಿಯಾದ, ಸಾದಾ ಜೇಡಿ ಮಣ್ಣು ಅಥವಾ ಸಗಣಿಯಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ವಿಗ್ರಹ ಬಳಸಬೇಕು. ಇಲ್ಲವಾದರೆ ನಿಯಂತ್ರಣ ಮಂಡಳಿಯ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಆ)ರ ಪ್ರಕಾರ ರೂ.10 ಸಾವಿರ ವರೆಗೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

ಅಲ್ಲದೆ ಈ ಬಗ್ಗೆ ನಗರಸಭೆಯಿಂದ ಅನುಮತಿ ಪಡೆಯುವ ಮುನ್ನ ರೂ.100 ಗಳ ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಸಲ್ಲಿಸುವುದು ಸರ್ಕಾರದ ಆದೇಶದ ಪ್ರಕಾರ ಕಡ್ಡಾಯವಾಗಿದೆ. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತಿಷ್ಠಾಪಿಸಿ ಕಾರ್ಯಕ್ರಮಆಯೋಜಿಸಬೇಕು ಎಂದು ಹೇಳಿದೆ. ಇಲ್ಲದಿದ್ದರೆ 10 ಸಾವಿರ ದಂಡದ ಜೊತೆಗೆ ಜೈಲು ಕೂಡ ಫಿಕ್ಸ್ ಎನ್ನಲಾಗಿದೆ.