Home News Gadaga: 3 ದಿನದಿಂದ ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಪ್ರತ್ಯಕ್ಷ- ಅಲ್ಲಿಗೆ ಹೇಗೆ ಹೋದಳೆಂದು ಕೇಳಿ ಬೆಚ್ಚಿಬಿತ್ತು...

Gadaga: 3 ದಿನದಿಂದ ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಪ್ರತ್ಯಕ್ಷ- ಅಲ್ಲಿಗೆ ಹೇಗೆ ಹೋದಳೆಂದು ಕೇಳಿ ಬೆಚ್ಚಿಬಿತ್ತು ಇಡೀ ಗ್ರಾಮ

Gadaga

Hindu neighbor gifts plot of land

Hindu neighbour gifts land to Muslim journalist

Gadaga ಜಿಲ್ಲೆಯ ತೋಟಗಂಟಿ ಗ್ರಾಮದಲ್ಲೊಂದು ವಿಚಿತ್ರ ಘಟನೆ ನಡೆದಿದೆ. 3 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಊರಿನ ಪಾಳುಬಾವಿಯಲ್ಲಿ ಸಿಕ್ಕಿದ್ದಾರೆ. 3 ದಿನಗಳ ಕಾಲ ಆಕೆ ಅದರಲ್ಲಿ ಅನ್ನಾಹಾರವಿಲ್ಲದೆ ಬದುಕಿದ್ದ ಆಕೆ ನೀಡುತ್ತಿರುವ ಕಾರಣವೇ ವಿಚಿತ್ರವಾಗಿದೆ.

ಹೌದು, ಕಾಣೆಯಾಗಿದ್ದ ಮಹಿಳೆ (Woman) ಮೂರು ದಿನದ ಬಳಿಕ ಬಾವಿಯಲ್ಲಿ (Well) ಪತ್ತೆಯಾಗಿದ್ದಾಳೆ. ಪಾರ್ವತಿ (23) ಕಾಣೆಯಾಗಿದ್ದ ಸಂತ್ರಸ್ತೆ. ಪಾರ್ವತಿ ಬಾವಿಯಲ್ಲಿ ಬದುಕಿದ್ದೇ ಪವಾಡ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಅಪರಿಚಿತ ಮಹಿಳೆಯೊಬ್ಬಳು ತನ್ನ ಕುತ್ತಿಗೆ ಹಿಡಿದುಕೊಂಡು ಬಂದು ಬಾವಿಗೆ ತಳ್ಳಿದಳು ಎಂದು ಆಕೆ ಹೇಳುತ್ತಿದ್ದಾಳೆ. ಆಧರೆ ಆ ಬಾವಿಯ ಸುತ್ತಲೂ ಗಿಡಗಂಟಿಗಳಿದ್ದು ಬೀಳಲು ಹೇಗೆ ಸಾಧ್ಯ ಎಂದು ಊರವರು ಅಚ್ಚರಿ ಪಡುತ್ತಿದ್ದಾರೆ. ಸದ್ಯ ಪಾರ್ವತಿಯವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಿಳೆ ಹೇಳೋದೇನು?
ಆ.20ರಂದು ನಸುಕಿನ ಜಾವ ಮನೆ ಅಂಗಳದಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಅಪರಿಚಿತರೊಬ್ಬರು ಸೀರೆಯುಟ್ಟು ಬಂದ್ರು. ಯಾರೆಂದು ಗೊತ್ತಾಗ್ಲಿಲ್ಲ. ನನ್ನ ಹತ್ರ ಬಂದು ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ಳು. ಕೈಬಳೆ, ಕಾಲುಂಗುರ ನೀಡುವಂತೆ ಒತ್ತಾಯ ಮಾಡಿದ್ಳು. ಆಮೇಲೆ ಕಣ್ಣು ಕಾಣದಂತೆ ಮರೆಮಾಡಿ ಕುತ್ತಿಗೆ ಹಿಡಿದು ಗೊವಿನ ಜೋಳದ ಹೊಲದ ಎಳೆದುಕೊಂಡು ಬಂದ್ಳು. ಅಲ್ಲಿ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದಳು. ನನಗೆ ಬಾವಿಗೆ ಬಿದ್ದ ಮೇಲೆ ಪ್ರಜ್ಞೆ ತಪ್ಪಿತು ಮಾರನೇ ದಿನ ನನಗೆ ಎಚ್ಚರವಾದಾಗ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಯ್ತು. ಆಗ ಕಿರುಚಿಕೊಂಡರು ಯಾರೂ ಸಹಾಯಕ್ಕೆ ಬರಲಿಲ್ಲ. ಆ.22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ರು ಎನ್ನುತ್ತಿದ್ದಾಳೆ ಮಹಿಳೆ.

ಮಹಿಳೆ ಹೇಳಿದ ಈ ಕಥೆ ಕೇಳಿದ ಗ್ರಾಮದ ಜನರಲ್ಲಿ ಹಾಗಾದರೆ ನಸುಕಿನ ಜಾವ ಮನೆ ಅಂಗಳದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು ಯಾರು? ಎಂಬ ಪ್ರಶ್ನೆ ತೀವ್ರ ಕುತೂಹಲ ಆತಂಕ ಹುಟ್ಟಿಸಿದೆ. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಮಹಿಳೆ. ಹೀಗಾಗಿ ಮೈಮೇಲೆ ತಾಳಿ ಉಂಗುರು ಚಿನ್ನದ ಸರ ಎಲ್ಲವೂ ತೊಟ್ಟಿದ್ದಾಳೆ. ಇದೆಲ್ಲ ಗಮನಿಸಿ ಪರಿಚಿತರೇ ಎಳೆದುಕೊಂಡು ಹೋದ್ರ? ಇದೊಂದು ವಿಚಿತ್ರ ರೀತಿಯ ಘಟನೆಯಾಗಿದ್ದು ಗ್ರಾಮಸ್ಥರು ಹೆದರಿದ್ದಾರೆ.