Home News Karnataka Gvt : ಇನ್ಮುಂದೆ ಗ್ರಾ.ಪಂ., ತಾ.ಪಂ., ಜಿ. ಪಂ.ಗಳಿಗೆ ಪ್ರತ್ಯೇಕ ಲಾಂಛನ, ಮೊಹರು ಹೊಂದಲು...

Karnataka Gvt : ಇನ್ಮುಂದೆ ಗ್ರಾ.ಪಂ., ತಾ.ಪಂ., ಜಿ. ಪಂ.ಗಳಿಗೆ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ- ಸರ್ಕಾರದಿಂದ ಮಹತ್ವದ ನಿರ್ಧಾರ

Hindu neighbor gifts plot of land

Hindu neighbour gifts land to Muslim journalist

Karnataka Gvt: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮದೇ ಆದ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಹೌದು, ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಇರುವಂತೆ ಸ್ವತಂತ್ರ ಸ್ಥಳೀಯ ಸರಕಾರಗಳು ಎಂಬ ನೆಲೆಯಲ್ಲಿ ಪಂಚಾಯತ್‌ಗಳಿಗೂ ಪ್ರತ್ಯೇಕ ಲಾಂಛನ ಬೇಕು ಎಂಬ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಇನ್ನು ಮುಂದೆ ಪ್ರತ್ಯೇಕ ಲಾಂಛನ ಇರಲಿದೆ.

ಅಂದಹಾಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 6ರಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಸ್ವಾಯತ್ತ ಅಧಿಕಾರ ಹೊಂದಿದೆ. ಪಂಚಾಯಿತಿ ಶಾಶ್ವತ ಉತ್ತರಾಧಿಕಾರ ಹೊಂದಿರುವುದರಿಂದ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ ನೀಡಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಳಕೆಗೆ ಮಾರ್ಗಸೂಚಿಗಳು

ಸಂವಿಧಾನದ 73ನೇ ತಿದ್ದುಪಡಿ ಉದ್ದೇಶವನ್ನು ಈಡೇರಿಸಲು ಮತ್ತು ಜನರು ಗ್ರಾಮ ಸ್ವರಾಜ್‌ ಸ್ಥಳೀಯ ಸ್ವಯಂ ಆಡಳಿತದ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಹಂತದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ 3 ಹಂತದ ಸಂಸ್ಥೆಗಳು ಅಧಿಕೃತ ಮುದ್ರೆ, ವಿನ್ಯಾಸದಲ್ಲಿ ಅರ್ಥಪೂರ್ಣವಾದ ಪ್ರತ್ಯೇಕ ಲಾಂಛನವನ್ನು ಸೃಜಿಸಲಾಗಿದೆ. ಇದರ ಬಳಕೆಗೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.

ಇದನ್ನೂ ಓದಿ: Viral Video : ಜಲಪಾತದ ತುದಿಯಲ್ಲಿ ನಿಂತು ಗೆಳತಿಗೆ ಪ್ರಪೋಸ್ – ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಯುವಕ !!