Home News Varturu Prakash: ಮಹಿಳೆ ಸಂಪರ್ಕದಿಂದ ಭಾರೀ ವಂಚನೆ – ಮಾಜಿ ಸಚಿವ, ಬಿಜೆಪಿ ಪ್ರಭಾವಿ...

Varturu Prakash: ಮಹಿಳೆ ಸಂಪರ್ಕದಿಂದ ಭಾರೀ ವಂಚನೆ – ಮಾಜಿ ಸಚಿವ, ಬಿಜೆಪಿ ಪ್ರಭಾವಿ ರಾಜಕಾರಣಿಯ ಬಂಧನ? ಕಾರಣ’ಗುಲಾಬ್‌ ಜಾಮೂನ್‌..!!

Hindu neighbor gifts plot of land

Hindu neighbour gifts land to Muslim journalist

Varturu Prakash: ರಾಜಕಾರಣಿಯ ಆಪ್ತೆ ಮಾಡಿರುವ ಕೃತ್ಯವು ಇದೀಗ ಬಿಜೆಪಿ ನಾಯಕರು ಒಬ್ಬರಿಗೆ ಮುಳುವಾಗಿದೆ. ಈ ಮೂಲಕ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕನಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ. ಕಾರಣ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆ..!! ಅದೂ ಅಲ್ಲದೆ ಒಂದು ಗುಲಾಬ್ ಜಾಮೂನ್(Gulab Jamoon ) ನಿಂದ ಎಲ್ಲದೂ ಬಯಲಾಗಿದೆ. ಏನಪ್ಪಾ ಇದು ಹೊಸ ಪ್ರಕರಣ ಅನ್ಕೊಳ್ತಿದ್ದೀರಾ. ಇಲ್ಲಿದೆ ನೋಡಿ ಎಲ್ಲಾ ಡೀಟೇಲ್ಸ್.

ಯಸ್, ಶ್ವೇತಾಗೌಡ ಎಂಬಾಕೆ ಚಿನ್ನದ ವ್ಯಾಪಾರಿಗೆ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೇಸ್‌ ಸಂಬಂಧ ಶ್ವೇತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ನನ್ನೊಂದಿಗೆ ವರ್ತೂರು ಪ್ರಕಾಶ್‌ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ಇದರಿಂದ ವರ್ತೂರು ಸಂತೋಷ್‌ ಅವರಿಗೂ ಇದೀಗ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಏನಿದು ಪ್ರಕರಣ?
ಆರೋಪಿ ಶ್ವೇತಾ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್‌ ಕೂಡ ನೀಡಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ವರ್ತೂರು ಪ್ರಕಾಶ್‌, ಎಸಿಪಿ ಗೀತಾ ಎದುರು ವಿಚಾರಣೆ (Police Inquiry) ಎದುರಿಸಿದ್ದಾರೆ. ಇದೇ ವೇಳೆ ಆರೋಪಿ ಶ್ವೇತಾ ಗೌಡ (Shweta Gowda) ಕೊಟ್ಟಿದ್ದ ಗಿಫ್ಟ್‌ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್‌ ಕೊಟ್ಟಿದ್ದಾರೆ. ಒಟ್ಟು 12.50 ಲಕ್ಷ ರೂ. ನಗದು, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರವನ್ನ ಎಸಿಪಿ ಗೀತಾ ಎದುರಿಗೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ವರ್ತೂರ್ ಪ್ರಕಾಶ್, ನನಗೆ ಆಕೆ ಸ್ನೇಹಿತೆ ಅಲ್ಲ. ಐದಾರು ತಿಂಗಳ. ಹಿಂದೆ ಪರಿಚಯ ಆಗಿದೆ. ನನ್ನ ಹೆಸರು ಬಳಸಿಕೊಂಡು ಚಿನ್ನಭಾರಣ ಖರೀದಿ ಮಾಡಿಕೊಂಡಿದ್ದಾಳೆ. ನನಗೂ ಮನಸ್ಸಿಗೆ ನೋವಾಗಿದೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಭಾರಣ ಕೊಟ್ಟಿದ್ದಾರೆ, ಅದ್ಹೇಗೆ ಕೊಟ್ರು ಗೊತ್ತಿಲ್ಲ. ನನ್ನ ತರ ಕೆಲ ರಾಜಕಾರಣಿಗಳು ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿ ಕೊಟ್ಟಿದ್ದೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಗುಲಾಬ್‌ ಜಾಮೂನ್‌ ಕಥೆ?
ವರ್ತೂರು ಪ್ರಕಾಶ್‌ ಅವರಿಗೆ ಶ್ವೇತಾ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ಪ್ರಕಾಶ್‌ ಅವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಮಾಡಿಕೊಂಡು ಪರಿಚಯವಾಗಿದ್ದ ಶ್ವೇತಾ, ನಂಬರ್‌ ಪಡೆದು ಇಬ್ಬರೂ ಫೋನ್‌ನಲ್ಲಿ ಮಾತುಕತೆ ಶುರು ಮಾಡಿದ್ದರು. ವಾಟ್ಸಪ್‌ನಲ್ಲೂ ಫುಲ್‌ ಚಾಟಿಂಗ್‌ ನಡೆದಿದ್ದು, ವರ್ತೂರು ಪ್ರಕಾಶ್‌ ಅವರ ಹೆಸರನ್ನು ಶ್ವೇತಾ ತಮ್ಮ ಫೋನ್‌ನಲ್ಲಿ “ಗುಲಾಬ್‌ ಜಾಮೂನ್‌” ಎಂದು ಸೇವ್‌ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಅಲ್ಲದೆ ವಿಚಾರಣೆ ವೇಳೆ ಶ್ವೇತಾಗೌಡ ಹಾಗೂ ವರ್ತೂರು ಪ್ರಕಾಶ್‌ಗೆ ನಿಕಟ ನಂಟಿರುವುದು ಪತ್ತೆಯಾಗಿದೆ. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಅಲ್ಲದೇ ತಿರುಪತಿಗೆ ಹೋಗಲು ಸಹ ಟಿಕೆಟ್ ಬುಕ್ ಮಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋ ಸಾಕ್ಷ್ಯಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲೀಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜೊತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೆ ಆತ್ಮೀಯತೆ ಮುಂದುವರಿದ ನಂತರ ಶ್ವೇತಾ ಬಳಿಯೇ ವರ್ತೂರು ಪ್ರಕಾಶ್ 10 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ ಅನ್ನೋ ಆರೋಪವೂ ಶ್ವೇತಾಳಿಂದ ಕೇಳಿಬಂದಿದೆ. ಮೂರು ಬ್ರೇಸ್ಲೆಟ್, ಒಂದು ಉಂಗುರ ಸೇರಿ, ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಹಾಕಿಸಿಕೊಂಡಿದ್ದರಂತೆ, ತಿರುಪತಿಗೆ ಹೋಗಲು ಶ್ವೇತಾ ಜೊತೆ ಟಿಕೆಟ್ ಕೂಡ ಬುಕ್ ಮಾಡಿದ್ದರಂತೆ, ಟಿಕೆಟ್ ಬುಕ್ ಮಾಡಿದ್ದ ಫೋಟೋ ಸಹ ಲಭ್ಯವಾಗಿದೆ. ಹೀಗೆ ಇಬ್ಬರೂ ಸೇರಿ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಬಹಿರಂಗವಾಗಿದೆ.