Home News Cattle Theft: ಜಾನುವಾರು ಕಳ್ಳತನ ಮಾಡಿ ಸಾಗಾಟ – ನಾಲ್ವರ ಬಂಧನ

Cattle Theft: ಜಾನುವಾರು ಕಳ್ಳತನ ಮಾಡಿ ಸಾಗಾಟ – ನಾಲ್ವರ ಬಂಧನ

Hindu neighbor gifts plot of land

Hindu neighbour gifts land to Muslim journalist

Cattle Theft: ದಕ್ಷಿಣ ಕೊಡಗಿನ ವಿರಾಜಪೇಟೆ ತಾಲೂಕು ಭಾಗದ ನೋಕ್ಯ ಮತ್ತು ಭದ್ರಾಗೋಳ ಗ್ರಾಮದಲ್ಲಿ ಹಸುಗಳನ್ನು ಹಾಗೂ ಎಮ್ಮೆಯೊಂದನ್ನು ಕಳ್ಳತನ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆ ಗ್ರಾಮದ ಉಬೈದ್ (37), ಪೊನ್ನoಪೇಟೆ ಸೀತಾ ಕಾಲೋನಿಯ ಗಜನ್ ಗಣಪತಿ (25), ಬೇಗೂರು ಗ್ರಾಮದ ಹನೀಫ್ (36) ಹಾಗೂ ಕೇರಳದ ಮಾನಂದವಾಡಿ ಅಜ ನಸ್ (21) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಬೊಲೆರೋ ಪಿಕಪ್, ಮಾರುತಿ ಓಮ್ನಿ, ಟಾಟಾ ಇಂಟ್ರಾ, ಒಂದು ಚಾಕು ಮತ್ತು ಹಗ್ಗ, 3 ಮೊಬೈಲ್ ಮತ್ತು 7 ಸಾವಿರ ರೂ ನಗದನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಜೂನ್ 24 ರಂದು ನೋಕ್ಯ ಗ್ರಾಮದ ಆನಂದ್ ಎಂಬುವವರ ತೋಟದ ಕೊಟ್ಟಿಗೆಯಲಿದ್ದ 2 ಹಸು ಮತ್ತು ಭದ್ರಗೋಳ ಗ್ರಾಮದ ಮುತ್ತಣ್ಣ ಸೇರಿದ ಎಮ್ಮೆಯನ್ನು ಕಳುವು ಮಾಡಲಾಗಿತ್ತು. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: D.K Shivakumar: ಮೊದಲು ದುಡ್ಡು ಕೊಡಿಸಿ – ಸುಮ್ಮನೆ ಮಾತು ಬೇಡ – ಕುಮಾರಸ್ವಾಮಿಯನ್ನು ಕಿಚಾಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್