Home News Dharmasthala: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌; ಬಿವೈವಿ

Dharmasthala: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌; ಬಿವೈವಿ

Hindu neighbor gifts plot of land

Hindu neighbour gifts land to Muslim journalist

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರಕ್ಕೆ ಇತಿಶ್ರೀ ಹಾಡುವುದಕ್ಕೆಂದು ಯಾತ್ರೆ ಮಾಡುತ್ತಿದ್ದು, ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ ಆಗುತ್ತಿದೆ. ಇವುಗಳಿಂದ ಹೊರಬರಬೇಕಾದರೆ ಪ್ರಕರಣವನ್ನು ರಾಜ್ಯ ಸರಕಾರ ಎನ್‌ಐಎ ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ ಮಾಡಿದರು.

ಧರ್ಮಸ್ಥಳದ ಚಲೋ ಯಾತ್ರೆ ಕೈಗೊಂಡಿರುವ ಬಿಜೆಪಿ ನಾಯಕರು ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ನಂತರ ಬಿವೈವಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಧರ್ಮಸ್ಥಳ ಹಿಂದೆ ಇರುವ ದುಷ್ಟ ಶಕ್ತಿಗಳು ಬಹಿರಂಗ ಆಗಬೇಕು. ಹಿಂದೂ ಸಮಾಜವನ್ನು ರಕ್ಷಣೆ ಮಾಡುವಂತಹ ಕೆಲಸ ಆಗಬೇಕು. ಈಗ SIT ಬಂಧನ ಮಾಡಿರುವುದು ಸಣ್ಣಪುಟ್ಟವರು. ಇದರ ಹಿಂದೆ ಬಲಾಢ್ಯರು ಇದ್ದಾರೆ. ಅವರನ್ನು ಹೊರಗೆ ತೆಗೆಯುವಂತಹ ಕೆಲಸ ಆಗಬೇಕು ಇದಕ್ಕೆ ಎನ್‌ಐಎ ತನಿಖೆ ಅಗತ್ಯ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ, ಆಡಳಿತ ಪಕ್ಷದವರು ಕೂಡಾ ಯಾತ್ರೆ, ಸಮಾವೇಶ ಮಾಡಿ ಮಂಜುನಾಥನ ದರ್ಶನ ಪಡೆಯಲಿ. ಆ ಸದ್ಭುದ್ಧಿಯನ್ನು ಭಗವಂತ ಅವರಿಗೆ ಕೊಡಲಿ ಎಂದು ಹೇಳಿದ್ದಾರೆ.

Global peace index: ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರಗಳ ಪಟ್ಟಿ ಬಿಡುಗಡೆ: ಭಾರತದ ಶ್ರೇಯಾಂಕ ಎಷ್ಟು ಹೆಚ್ಚಾಗಿದೆ? ಪಾಕಿಸ್ತಾನ ಯಾವ ಸ್ಥಾನದಲ್ಲಿದೆ?