Home News Woman: ಕನ್ಯತ್ವ ಪರೀಕ್ಷೆಗೆ ಮಹಿಳೆಯನ್ನು ಒತ್ತಾಯಿಸುವುದು, ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ: ಹೈಕೋರ್ಟ್

Woman: ಕನ್ಯತ್ವ ಪರೀಕ್ಷೆಗೆ ಮಹಿಳೆಯನ್ನು ಒತ್ತಾಯಿಸುವುದು, ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ: ಹೈಕೋರ್ಟ್

High Court

Hindu neighbor gifts plot of land

Hindu neighbour gifts land to Muslim journalist

Woman: ಮಹಿಳೆಯನ್ನು (Woman) ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಬಾರದು. ಇದು ಸಂವಿಧಾನದ 21 ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್ಘಡ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮೂಲಭೂತ ಹಕ್ಕುಗಳು, ನೈಸರ್ಗಿಕ ನ್ಯಾಯದ ಪ್ರಮುಖ ತತ್ವಗಳು ಮತ್ತು ಮಹಿಳೆಯ ರಹಸ್ಯ ನಮ್ರತೆಗೆ ವಿರುದ್ಧವಾಗಿದ್ದು 21ನೇ ವಿಧಿಯು “ಮೂಲಭೂತ ಹಕ್ಕುಗಳ ಹೃದಯ” ಎಂದು ಪೀಠವು ಪುನರುಚ್ಚರಿಸಿದೆ.

2024ರ ಅಕ್ಟೋಬರ್ 15ರಂದು ವ್ಯಕ್ತಿಯೊಬ್ಬ ತನ್ನ ಪತ್ನಿಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿ ಸಲ್ಲಿಸಿದ ಕ್ರಿಮಿನಲ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.