Home News Increase credit score: ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್; ಬ್ಯಾಂಕುಗಳೇ ನಿಮ್ಮನ್ನು ಕರೆದು ಸಾಲ...

Increase credit score: ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್; ಬ್ಯಾಂಕುಗಳೇ ನಿಮ್ಮನ್ನು ಕರೆದು ಸಾಲ ನೀಡುತ್ತೆ

Hindu neighbor gifts plot of land

Hindu neighbour gifts land to Muslim journalist

Increase credit score: ಸಾಲದ ಅವಶ್ಯಕತೆ ಪ್ರತಿಯೊಬ್ಬರಿಗೆ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇದೆ. ಹಾಗಿರುವಾಗ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಅದರಲ್ಲೂ ಉತ್ತಮ ಸ್ಕೋರ್ ಇದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. ಮತ್ತು ಬ್ಯಾಂಕ್ ಗಳು ನಿಮನ್ನು ಕರೆದು ಸಾಲ ಕೊಡುತ್ತವೆ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಮ್ಮಿ ಇದ್ದರೆ ಯಾವ ಬ್ಯಾಂಕ್ ನಲ್ಲೂ ಸಾಲ ಸಿಗುವುದಿಲ್ಲ.

ಮುಖ್ಯವಾಗಿ 300ರಿಂದ 850 ಶ್ರೇಣಿಯಲ್ಲಿರುವ ಕ್ರೆಡಿಟ್ ಸ್ಕೋರ್ 650 ಅಂಕಗಳಿಗಿಂತ ಹೆಚ್ಚು ಇದ್ದರೆ ಸುಲಭವಾಗಿ ಬ್ಯಾಂಕ್ ಸಾಲ ಪಡೆಯಬಹುದು. ಹೌದು, ತುರ್ತು ಪರ್ಸನಲ್ ಲೋನ್ ಬೇಕಾಗಿದ್ದರೆ ಕ್ರೆಡಿಟ್ ಸ್ಕೋರ್ ಬಹಳ ಸಹಾಯಕ್ಕೆ ಬರುತ್ತದೆ. ಆದರೆ ಯಾವುದೇ ಸಾಲ ಮಾಡದ ಮತ್ತು ಕ್ರೆಡಿಟ್ ಕಾರ್ಡ್ ಉಪಯೋಗಿಸದ ವ್ಯಕ್ತಿಗಳು ಕ್ರೆಡಿಟ್ ಸ್ಕೋರ್ ಸಂಪಾದಿಸುವುದು (Increase credit score) ಹೇಗೆ ಎನ್ನುವ ಟಿಪ್ಸ್ ಇಲ್ಲಿದೆ.

ಮೊದಲು ನೀವು ಕ್ರೆಡಿಟ್ ಸ್ಕೋರ್​ನ ಬಗ್ಗೆ ತಿಳಿದಿರಬೇಕು. ಮುಖ್ಯವಾಗಿ  ನೀವು ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಇತ್ಯಾದಿ ಸಾಲ ವನ್ನು ಹೇಗೆ ಪಾವತಿ ಮಾಡುತ್ತೀರಿ ಮತ್ತು ಎಂಬುದರ ಮೇಲೆ ಕ್ರೆಡಿಟ್ ಸ್ಕೋರ್ ಅನ್ನು ಏಜೆನ್ಸಿಗಳು ನೀಡುತ್ತವೆ. 300 ರಿಂದ 850 ಅಂಕಗಳ ಶ್ರೇಣಿಯಲ್ಲಿ ಸ್ಕೋರ್ ಇರುತ್ತದೆ. 650ಕ್ಕಿಂತ ಮೇಲ್ಪಟ್ಟ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.

ನಿಮ್ಮ್ ಕ್ರೆಡಿಟ್ ಸ್ಕೋರ್ ಮೈನಸ್ 1 ಇದ್ದಾಗ ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಟಿಪ್ಸ್:

ಮುಖ್ಯವಾಗಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದವರಿಗೆ ಕ್ರೆಡಿಟ್ ಸ್ಕೋರ್ ಇರುವುದಿಲ್ಲ. ಅವರ ಕ್ರೆಡಿಟ್ ಸ್ಕೋರ್ ಮೈನಸ್ 1 ಎಂದು ತೋರಿಸಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನ ಬಳಸಿ.

ಟಿಪ್ಸ್ 1:  ಸಣ್ಣ ಸಾಲಗಳನ್ನು ಮಾಡಿ:

ನೀವು ಕ್ರೆಡಿಟ್ ಸ್ಕೋರ್ ಪಡೆಯಲು ಸಾಲ ಮಾಡಿ ಅದನ್ನು ಸಕಾಲಕ್ಕೆ ತೀರಿಸಿರಿ. ಉದಾಹರಣೆಗೆ, ಮೂವತ್ತು ಸಾವಿರ ರೂ ಸಾಲ ಪಡೆದು, ಮಾಸಿಕ ಇಎಂಐ ಅನ್ನು ತಪ್ಪದೇ ಕಟ್ಟಿರಿ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ. ಅದು ಮುಗಿದ ಬಳಿಕ ಮತ್ತೆ  ಹೊಸ ಸಾಲ ಮಾಡಬಹುದು. ಇವೆಲ್ಲವೂ ಕ್ರೆಡಿಟ್ ಸ್ಕೋರ್ ಹೆಚ್ಚಳಕ್ಕೆ ಸಹಾಯವಾಗುತ್ತದೆ.

ಟಿಪ್ಸ್ 2: ಕ್ರೆಡಿಟ್ ಕಾರ್ಡ್

ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಸ್ವಲ್ಪ ಸ್ವಲ್ಪವೇ ಬಳಸಿರಿ. ಅಂದರೆ ನಿಮ್ಮ ಕಾರ್ಡ್​ನ ಕ್ರೆಡಿಟ್ ಮಿತಿಯ ಶೇ. 40ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ವ್ಯಯಿಸಿ. ಅದರ ಬಿಲ್ ಅನ್ನು ಸಕಾಲಕ್ಕೆ ಪಾವತಿಸುವುದನ್ನು ಮರೆಯಬೇಡಿ. ಒಂದುವೇಳೆ ನಿಮಗೆ ದೊಡ್ಡ ಮೊತ್ತದ ಖರ್ಚು ಇದ್ದಲ್ಲಿ ಇನ್ನೊಂದು ಕಾರ್ಡ್ ಪಡೆಯಿರಿ.

ಹೀಗೆ ಮಾಡಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚು ಮಾಡಿ ಸಾಲ ಪಡೆಯಬಹುದು.