Home News Solar Panel: ವಿದ್ಯುತ್ ಉತ್ಪಾದನೆಗೆ ‘ತೇಲುವ ಸೌರ ವಿದ್ಯುತ್ ಫಲಕ’: ಯಲಹಂಕದ 2 ಕೆರೆಗಳಿಗೆ ಅಳವಡಿಕೆಗೆ...

Solar Panel: ವಿದ್ಯುತ್ ಉತ್ಪಾದನೆಗೆ ‘ತೇಲುವ ಸೌರ ವಿದ್ಯುತ್ ಫಲಕ’: ಯಲಹಂಕದ 2 ಕೆರೆಗಳಿಗೆ ಅಳವಡಿಕೆಗೆ ಸರ್ಕಾರ ಸಿದ್ಧತೆ

Hindu neighbor gifts plot of land

Hindu neighbour gifts land to Muslim journalist

Solar Panel: ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಯಲಹಂಕದ ಎರಡು ಕೆರೆಗಳನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಯಲಹಂಕದ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿಯ ಎರಡು ಕೆರೆ ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಕೆರೆಗಳಲ್ಲಿ ಶೇ.10ರಷ್ಟು ತೇಲುವ ಫೋಟೊ ವೋಲ್ಟಾಯಿಕ್‌ (FPV) ಫಲಕಗಳ ಅಳ ವಡಿಸಿ, 20 ಮೆಗಾವ್ಯಾಟ್ ವಿದ್ಯುತ್ ಉತ್ಪಾ ದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಯೋಜನೆಗೆ ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿ ಕಾರದಿಂದ ಅನುಮೋದನೆ ದೊರೆತಿದ್ದು, ಫಲಕಗಳನ್ನು ಕರ್ನಾಟಕ ನವೀಕರಿಸಬಹು ದಾದ ಇಂಧನ ಅಭಿವೃದ್ಧಿ ಲಿಮಿಟೆಡ್ ಸ್ಥಾಪಿಸಲಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಸಭೆಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರ ಪ್ರಶ್ನೆಗೆ ಉತ್ತರಿಸಿದರು.

ಈ ಯೋಜನೆಯ ಫಲಿತಾಂಶದ ಆಧಾರದ ಮೇಲೆ ರಾಜ್ಯದಾದ್ಯಂತ ಇತರೆ ಕೆರೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸ ಲಾಗುವುದು ಎಂದು ಡಿಸಿಎಂ ಹೇಳಿದರು.

Human-Animal: ಅರಣ್ಯ ಇಲಾಖೆಯಲ್ಲಿ 310 ವೀಕ್ಷಕರು; 540 ರಕ್ಷಕರ ನೇಮಕಾತಿ : ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಕ್ರಮ – ಅರಣ್ಯ ಸಚಿವ ಖಂಡ್ರೆ